ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ: ರೈತನ ಬೆವರಿನ ಫಲ ಕಳ್ಳರ ಪಾಲು - 5 ಕ್ವಿಂಟಲ್ ಬೆಳ್ಳುಳ್ಳಿ ಕಳವು

ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮದ ರೈತ ಸಿದ್ದರಾಜು ಎಂಬವರ ಜಮೀನಿನಲ್ಲಿ ಬೆಳೆದಿದ್ದ ಬೆಳ್ಳುಳ್ಳಿಯನ್ನು ಕಳ್ಳರು ನಿನ್ನೆ ರಾತ್ರಿ ಕಳವು ಮಾಡಿರುವ ಘಟನೆ ನಡೆದಿದೆ.

ಸುಮಾರು 5 ಕ್ವಿಂಟಲ್ ಬೆಳ್ಳುಳ್ಳಿಯನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಸಿದ್ದರಾಜು ಅವರು ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳ್ಳುಳ್ಳಿ ಬೆಳೆ ಬೆಳೆದಿದ್ದು, ಉತ್ತಮ ಇಳುವರಿ ನೀಡಿದ್ದ ಬೆಳೆ ಕಟಾವು ಹಂತದಲ್ಲಿತ್ತು.

ಘಟನೆಯ ಕುರಿತು ಮಾತನಾಡಿದ ರೈತ ಸಿದ್ದರಾಜು ಅವರು, "ಸಾಲ ಮಾಡಿ ಬೆಳೆ ಬೆಳೆದಿದ್ದೆ. ಈಗ ಕಳ್ಳತನದಿಂದ ನನಗೆ ತುಂಬಲಾರದ ನಷ್ಟವಾಗಿದೆ. ಈ ನೋವನ್ನು ಹೇಳಲು ಮಾತೇ ಬರುತ್ತಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.

Edited By :
PublicNext

PublicNext

03/08/2026 02:28 pm

Cinque Terre

11.52 K

Cinque Terre

0

ಸಂಬಂಧಿತ ಸುದ್ದಿ