ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: 'ಮಕ್ಕಳಿಗೆ ಹಾಲಿನ ಪೌಡರ್ ಕೊಡೋದಕ್ಕೆ ಇಂಡೆಂಟ್ ಬಂದಿಲ್ಲ' ಎಂದ ಅಧಿಕಾರಿಗಳಿಗೆ ಉಪಲೋಕಾಯುಕ್ತ ವೀರಪ್ಪ ತರಾಟೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಚಿತ್ತವಾಡಗಿ ಏರಿಯಾದಲ್ಲಿರೋ ಅಂಗನವಾಡಿ ಕೇಂದ್ರಕ್ಕೆ ಉಪಲೋಕಾಯುಕ್ತ ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ, ಬಾಣಂತಿಯರಿಗೆ ಹಾಲಿನ ಪೌಡರ್ ವಿಚಾರದಲ್ಲಿ ಅಧಿಕಾರಿಗಳು ಪ್ರತಿ ತಿಂಗಳು ಯಾಮಾರಿಸುತ್ತಾರೆ. ಉಪಲೋಕಾಯುಕ್ತ ವೀರಪ್ಪ ಅಂಗನವಾಡಿಗೆ ಭೇಟಿ ನೀಡಿದ ವೇಳೆ ಮಕ್ಕಳಿಗೆ ಹಾಲಿನ ಪೌಡರ್ ಕೊಟ್ಟಿಲ್ಲ ಅನ್ನೋದು ಬೆಳಕಿಗೆ ಬಂದಿದ್ದಕ್ಕೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು.

ಇದೇ ವೇಳೆ ಲಕ್ಷಾಂತರ ರೂಪಾಯಿ ಸರ್ಕಾರಿ ಹಣ ಹೇಗೆ ಬೇಕೋ ಹಾಗೆ ಖರ್ಚಾಗಿ ಹೋಗ್ತಿದೆ. ನೀವು ಇಂಡೆಂಟ್ ಹಾಕಿಲ್ಲ ಅಂತ ಹೇಳ್ತಿದಿರಾ..? ಹೀಗಾದ್ರೆ ಹೇಗೆ, ಸರಿಯಾಗಿ ನಿರ್ವಹಣೆ ಮಾಡಿ. ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತೆ ಅಂತ ವೀರಪ್ಪ ಅವರು ಖಡಕ್ ವಾರ್ನ್ ಮಾಡಿದ್ರು.

Edited By :
PublicNext

PublicNext

26/07/2026 08:18 am

Cinque Terre

9.63 K

Cinque Terre

0

ಸಂಬಂಧಿತ ಸುದ್ದಿ