ತುಮಕೂರು : ಕಂದಾಯ ಸಚಿವರ ತವರು ಜಿಲ್ಲೆಯಲ್ಲಿ ಅಕ್ರಮ ಭೂಮಾಫಿಯಾ ಸದ್ದಿಲ್ಲದೆ ತಲೆ ಎತ್ತಿದ್ದು, ಭೂ ಮಾಫಿಯಾ ಗೆ ಕಂದಾಯ ಇಲಾಖೆ ಅಧಿಕಾರಿಗಳೂ ಸಹ ಕೈ ಜೋಡಿಸುತ್ತಿರುವ ಪರಿಣಾಮ ಸಾಕಷ್ಟು ಬಡ ರೈತ ಕುಟುಂಬಗಳು ಬೀದಿ ಪಾಲಾಗುತ್ತಿವೆ.
ತುಮಕೂರು ತಾಲ್ಲೂಕು ಕೋರ ಹೋಬಳಿ ಹೊಟ್ಟೆಮಲ್ಲನಪಾಳ್ಯ ಗ್ರಾಮದಲ್ಲಿ ಭೂ ಮಾಫಿಯಾದಿಂದ ಬಡ ರೈತ ಕುಟುಂಬವೊಂದು ಭೂಮಿಯನ್ನೇ ಕಳೆದುಕೊಂಡಿದ್ದು ನ್ಯಾಯಕ್ಕಾಗಿ ಪ್ರತಿಭಟನೆ ಆರಂಭಿಸಿ ದಯಾಮರಣಕ್ಕೆ ಆಗ್ರಹಿಸಿದೆ.
ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಬಡ ರೈತ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ತಿತಿ ನಿರ್ಮಾಣವಾಗಿದೆ,ಏಳೆಂಟು ತಿಂಗಳಿಂದ ತಾಲ್ಲೂಕು ಕಚೇರಿಗೆ ಅಲೆದು ಸುಸ್ತಾದ ಕುಟುಂಬ ದಯಾಮರಣಕ್ಕೆ ಆಗ್ರಹಿಸಿ ಹೋರಾಟ ಆರಂಭಿಸಿದೆ.
ಮರಣ ಪ್ರಮಾಣ ಪತ್ರ ತಯಾರಿಸುವಾಗ ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಬಡ ರೈತ ಕುಟುಂಬ ಬೀದಿಗೆ ಬಂದಿದೆ ತಂದೆಯ ಹೆಸರನ್ನು ಗಂಡನ ಹೆಸರಿನ ಮುಂದೆ ನಮೂದಿಸಿ ಕಂದಾಯ ಇಲಾಖೆ ಮಾಡಿರುವ ಎಡವಟ್ಟು ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ.
ಜಮೀನು ಕಬಳಿಸಿದ ಬೇನಾಮಿ ವ್ಯಕ್ತಿಗಳು......
ಮರಣ ಪ್ರಮಾಣ ಪತ್ರವನ್ನು ತಪ್ಪಾಗಿ ನಮೂದಿಸಿದ ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ದೊಡ್ಡಬಳ್ಳಾಪುರ ಮೂಲದ ಬೇನಾಮಿ ವ್ಯಕ್ತಿಗಳು ಸುಳ್ಳು ವಂಶ ವೃಕ್ಷ ಸೃಷ್ಟಿಸಿ ಹೊಟ್ಟೆ ಮಲ್ಲಯ್ಯನಪಾಳ್ಯದ ಸ.ನಂ.16/4 ರ ಜಮೀನು ಲಪಟಾಯಿಸಿದ್ದಾರೆ ಎಂದು ಜಮೀನಿನ ಮಾಲೀಕ ಗಂಗಣ್ಣ ಹಾಗೂ ಸುಕನ್ಯ ಆರೋಪಿಸಿದ್ದಾರೆ, ನಾವು ಈ ಜಮೀನಿನ ಅನುಭವದಲ್ಲಿದ್ದೇವೆ,ಬೇನಾಮಿ ವ್ಯಕ್ತಿಗಳು ನಕಲಿ ವಂಶ ವೃಕ್ಷ ಸೃಷ್ಟಿಸಿ ನಮಗೆ ಯಾವುದೇ ನೋಟೀಸ್ ನೀಡದೆ ನ್ಯಾಯಾಲಯದಲ್ಲಿ ಸುಳ್ಳು ದಾವೆ ಹೂಡಿ ಡಿಕ್ರಿ ಮಾಡಿಸಿಕೊಂಡು ಜಮೀನು ಕಬಳಿಸಲು ಬಂದಿದ್ದಾರೆ,ಕಂದಾಯ ಇಲಾಖೆ ಅಧಿಕಾರಿಗಳೂ ಸಹ 21 ಪಾರಂ ತಯಾರಿಸುವಾಗ ಸ್ತಳೀಯರ ಹೇಳಿಕೆ ಪಡೆದಿಲ್ಲ ,ನಮ್ಮ ಗಮನಕ್ಕೂ ತರದೆ ದಾಖಲೆ ಸೃಷ್ಟಿಸಿದ್ದಾರೆ ಎಂದು ಸುಕನ್ಯ ಆರೋಪಿಸಿದ್ದಾರೆ,ಕೋರ ಪೊಲೀಸ್ ಠಾಣೆಯಲ್ಲಿಯೂ ಸಹ ನಮಗೆ ನ್ಯಾಯ ಸಿಗುತಿಲ್ಲ ಅಲ್ಲಿರುವ ಕೆಲ ಅಧಿಕಾರಿಗಳು ಸಹ ನಮ್ಮ ಆಸ್ತಿ ಕಬಳಿಸುವವರ ಪರ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ.....
ಮರಣ ಪ್ರಮಾಣ ಪತ್ರ ತಿದ್ದುಪಡಿಮಾಡಲು ಸುಕನ್ಯ ಅವರನ್ನು ಕಂದಾಯ ಇಲಾಕೆ ಅಧಿಕಾರಿಗಳು 8 ತಿಂಗಳು ಕಚೇರಿಗೆ ಅಲೆಸಿದ್ದಾರೆ,ತಹಶೀಲ್ದಾರ್ ಆದೇಶ ಮಾಡಿರುವ ಪ್ರತಿಯನ್ನು ನಮೂದಿಸುವಾಗ ಮಾಡುವ ಪ್ರಮಾದದಿಂದ ಸಾಕಷ್ಟು ಅವಾಂತರ ಸೃಷ್ಟಿಸಿದೆ,ದೊಡ್ಡಬಳ್ಳಾಪುರ ಮೂಲದವರಿಗೆ ಇಲ್ಲಿನ ವಂಶವೃಕ್ಷ ಸೃಷ್ಟಿಸಲು ಅವಕಾಶವಿದೆಯೇ,ಈ ಮಾಪಿಯಾ ಹಿಂದೆ ಸ್ತಳೀಯ ಗ್ರಾಮಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು,ತಹಶೀಲ್ದಾರರವರೆಗೂ ಉನ್ನತ ಅಧಿಕಾರಿಗಳ ಕೈವಾಡವಿದೆ ಎಂದು ಕುಟುಂಬ ಶಂಕಿಸಿದೆ.
ಕಂದಾಯ ಸಚಿವರ ತವರು ಜಿಲ್ಲೆಯಲ್ಲೇ ಈ ರೀತಿ ಅಕ್ರಮ ನಡೆದಿರುವುದು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ತಲೆ ತಗ್ಗಿಸುವಂತಾಗಿದೆ,ಸಮಸ್ಯೆ ಬಗೆಹರಿದು ಸಂಬಂದ ಪಟ್ಟ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕುಟುಂಬ ಬಿಗಿ ಪಟ್ಟು ಹಿಡಿದಿದೆ.
Kshetra Samachara
28/07/2026 03:45 pm