ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಫಲಶೃತಿ: ಗ್ರಾಮ ಲೆಕ್ಕಿಗ ಎತ್ತಂಗಡಿ - ಅಕ್ರಮ ಖಾತೆ ಮಾಡಿದವರನ್ನು ಮನೆಗೆ ಕಳಿಸಬೇಕೆಂದು ಗ್ರಾಮಸ್ತರ ಆಗ್ರಹ......

ತುಮಕೂರು

ಕಂದಾಯ ಸಚಿವರ ತವರು ಜಿಲ್ಲೆಯಲ್ಲಿ ಅಕ್ರಮ ಖಾತೆ ಸೃಷ್ಟಿಸಿ ಬಡ ರೈತರ ಜಮೀನು ಕಬಳಿಸಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ ಹೋರಾಟದ ಫಲವಾಗಿ ಗ್ರಾಮಲೆಕ್ಕಿಗನನ್ನು ಸದರಿ ವೃತ್ತದಿಂದ ಎತ್ತಂಗಡಿ ಮಾಡಲಾಗಿದೆ.

ಪಬ್ಲಿಕ್ ನೆಕ್ಸ್ಟ್ ಸುದ್ದಿ ವಾಹಿನಿ ಪ್ರತಿಭಟನೆಯ ಬಗ್ಗೆ ಎರಡು ದಿನ ವಿಸ್ತ್ರುತ ವರದಿ ಪ್ರಕಟಿಸಿತ್ತು ವರದಿ ಪರಿಣಾಮ ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ತುಮಕೂರು ತಾಲ್ಲೂಕು ತಹಶೀಲ್ದಾರರು ಗ್ರಾಮಲೆಕ್ಕಿಗ ಸುನಿಲ್ ಕುಮಾರ್ ಅವರನ್ನು ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದಾರೆ.

ತುಮಕೂರು ತಾಲ್ಲೂಕು ಕೋರ ಹೋಬಳಿ ಕಾಡಸಿದ್ದಯ್ಯನಪಾಳ್ಯದ ಸಮೀಪದಲ್ಲಿರುವ ಹೊಟ್ಟೆಮಲ್ಲನಪಾಳ್ಯದ ಸ.ನಂ.16/4 ರ 2 ಎಕರೆ ಜಮೀನನ್ನು ಜಮೀನಿನ ಮೂಲ ಅನುಭವದಾರರ ಗಮನಕ್ಕೆ ಬಾರದಂತೆ ದೊಡ್ಡಬಳ್ಳಾಪುರ ಮೂಲದವರಿಗೆ ಅಕ್ರಮ ಖಾತೆಯಾಗಿತ್ತು, ಈ ಅಕ್ರಮ ಕಂಡುಹಿಡಿದ ಬಳಿಕ ಜಮೀನಿನ ಮೂಲವಾರಸುದಾರರು ಸದರಿ ಗ್ರಾಮದ ಗ್ರಾಮ ಲೆಕ್ಕಿಗನನ್ನು ಪ್ರಶ್ನಿಸಿದಾಗ ಜಮೀನಿನ ಖಾತೆಯಾದ ಬಳಿಕ 21 ಪಾರಂ ಗೆ ಬೇರೊಂದು ಗ್ರಾಮದಲ್ಲಿ ಸಹಿ ಪಡೆದು ಪ್ರಕರಣ ಬೆಳಕಿಗೆ ಬಂದಿತ್ತು,ಜೊತೆಗೆ ಅಕ್ರಮ ಮಾಡಿರುವ ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಬೇಕು,ಜಮೀನು ಮೂಲ ಖಾತೆದಾರರಾದ ನಮ್ಮ ಹೆಸರಿಗೆ ಉಳಿಸಬೇಕು ಎಂದು ಜಮೀನಿನಮಾಲೀಕರಾದ ಗಂಗಣ್ಣ ಉಪವಾಸ ಸತ್ಯಾಗ್ರಹ ಆರಂಭಿಸಿ ದಯಾಮರಣಕ್ಕೆ ಒತ್ತಾಯಿಸಿದ್ದರು.

ತುಮಕೂರು ತಾಲ್ಲೂಕು ತಹಶೀಲ್ದಾರ್ ರಾಜೇಶ್ವರಿ,ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವೂ ಪ್ರತಿಭಟನಾ ಸ್ತಳಕ್ಕೆ ತೆರಳಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನಿಮ್ಮ ಜೊತೆ ಇರುತ್ತದೆ,ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ,ನಿಮ್ಮ ಜೊತೆ ನಾವಿದ್ದೇವೆ,ನಿಮ್ಮ ಎಲ್ಲಾ ಸಮಸ್ಯೆ ಕಾನೂನಾತ್ಮಕವಾಗಿ ಬಗೆಹರಿಸುವ ಜೊತೆಗೆ ಅಕ್ರಮ ಮಾಡಿರುವ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿ ಪ್ರತಿಭಟನೆಗೆ ತೆರೆ ಎಳೆದಿದ್ದಾರೆ.

ಶಿಸ್ತು ಕ್ರಮ ಆಗಲೇಬೇಕು.....

ಖಾತೆ ವರ್ಗಾವಣೆಯಾದ ಮೇಲೆ 21 ಪಾರಂ ಬೇರೆ ಗ್ರಾಮದಲ್ಲಿ ಜಾರಿ ಮಾಡಿ ಅಕ್ರಮ ಮಾಡಿರುವ ಗ್ರಾಮಲೆಕ್ಕಿಗ ಸುನಿಲ್ ಕುಮಾರ್ ನನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಹಾಗೂ ಕಂದಾಯ ನಿರೀಕ್ಷಕರ ಮೇಲೂ ಶಿಸ್ತು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ತರ ಆಗ್ರಹವಾಗಿದೆ, ಜಿಲ್ಲಾಡಳಿತ ಇವರ ಮೇಲೆ ಜರುಗಿಸುವ ಕಾನೂನು ಕ್ರಮ ಅಕ್ರಮಮಾಡಿ ಬಡವರ ಜಮೀನು ಕಬಳಿಸುವ ಗ್ರಾಮಲೆಕ್ಕಿಗರಿಗೆ ಪಾಠವಾಗಬೇಕು ನೊಂದ ಕುಟುಂಬಸ್ತರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

31/07/2026 10:39 pm

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ