ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೀರ್ಥಹಳ್ಳಿ-ರಿಪ್ಪನ್‌ಪೇಟೆ-ಸಾಗರ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭ: ಖಾಸಗಿ ಬಸ್ ಏಜೆಂಟರ ಆಕ್ಷೇಪ

ಶಿವಮೊಗ್ಗ : ರಿಪ್ಪನ್‌ಪೇಟೆ–ತೀರ್ಥಹಳ್ಳಿ–ಸಾಗರ ಮಾರ್ಗದಲ್ಲಿ ಸಂಚರಿಸುವ ಬಹುಕಾಲದ ಸಾರ್ವಜನಿಕ ಬೇಡಿಕೆಯಾಗಿದ್ದ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಗೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು. ಹೊಸನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸ್ ಸಂಚಾರ ಆರಂಭಗೊಳ್ಳುತ್ತಿದ್ದಂತೆಯೇ, ಕೆಲ ಖಾಸಗಿ ಬಸ್ ಏಜೆಂಟರು ಹಾಗೂ ಮಾಲೀಕರು ಪರ್ಮಿಟ್ ಮತ್ತು ಸಂಚಾರ ಸಮಯದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಖಾಸಗಿ ಬಸ್ ಪ್ರತಿನಿಧಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

​ಸ್ಥಳೀಯ ಮುಖಂಡರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರಾದರೂ ವಾಗ್ವಾದ ಮುಂದುವರಿಯಿತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಪರಿಸ್ಥಿತಿ ನಿಯಂತ್ರಿಸಿ, ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳುವಂತೆ ಖಾಸಗಿ ಬಸ್ ಮಾಲೀಕರಿಗೆ ಬುದ್ಧಿವಾದ ಹೇಳಿದ ನಂತರ ವಿವಾದ ಬಗೆಹರಿಯಿತು.

Edited By :
PublicNext

PublicNext

31/07/2026 08:22 am

Cinque Terre

13.34 K

Cinque Terre

0

ಸಂಬಂಧಿತ ಸುದ್ದಿ