ಶಿವಮೊಗ್ಗ: ನಗರದ ಆಟೋ ಕಾಂಪ್ಲೆಕ್ಸ್‌ನಲ್ಲಿರುವ ಕಾರ್ ಗ್ಯಾರೇಜ್‌ವೊಂದರಲ್ಲಿ ಕ್ಯಾಶ್ ಡ್ರಾನಲ್ಲಿದ್ದ ಹಣ ಕಳವು ಮಾಡಲಾಗಿದ್ದು, ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರವಿ ಎನ್. ಅವರು ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್‌ನ 2ನೇ ಕ್ರಾಸ್‌ನಲ್ಲಿ ಕಾರ್ ಗ್ಯಾರೇಜ್ ನಡೆಸುತ್ತಿದ್ದಾರೆ. ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕ್ಯಾಶ್ ಡ್ರಾನಲ್ಲಿದ್ದ ₹30,000 ನಗದು ಕಳವು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಕೂಡ ಗ್ಯಾರೇಜ್‌ನಲ್ಲಿ ಎರಡು ಬಾರಿ ಹಣ ಕಳುವಾಗಿದ್ದರೂ, ಬೇರೆ ಯಾರೋ ಕಳವು ಮಾಡಿರಬಹುದು ಎಂದು ಮಾಲೀಕರು ಅನುಮಾನ ವ್ಯಕ್ತಪಡಿಸಿ ಸುಮ್ಮನಿದ್ದರು.
ಗ್ಯಾರೇಜ್‌ಗೆ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಹಿಂದೆ ಕಳುವಾಗಿದ್ದ ಹಣ ಸೇರಿದಂತೆ ಒಟ್ಟು ₹48,000 ಹಣವನ್ನು ಕೆಲಸಗಾರನೇ ಕಳವು ಮಾಡಿರುವುದು ತಿಳಿದುಬಂದಿದೆ.
ಈ ಕುರಿತು ಗ್ಯಾರೇಜ್ ಮಾಲೀಕ ರವಿ ಎನ್. ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
PublicNext
06/08/2026 09:36 am
LOADING...