ಶಿವಮೊಗ್ಗ: ಸುಮಾರು 34 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿಯೊಬ್ಬನನ್ನು ತೀರ್ಥಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶಿಕಾರಿಪುರದ ಮತ್ತಿಗೆ ಮೂಲದ, ಹಾಲಿ ಸಾಗರ ನಿವಾಸಿ ಶೇಖರ ಅಲಿಯಾಸ್ ಮತ್ತಿಗೆ ಶೇಖರ (65) ಎಂದು ಗುರುತಿಸಲಾಗಿದೆ.
ಆರೋಪಿ ಶೇಖರನ ವಿರುದ್ಧ 1990ರಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಕನ್ನಗಳವು (Crime No: 174/1990, 175/1990, 177/1990 U/s 457, 380 IPC) ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ದಾಖಲಾದ ದಿನದಿಂದಲೂ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈ ಸಂಬಂಧ ನ್ಯಾಯಾಲಯವು LPR ಸಂಖ್ಯೆ: 07/97, 08/97, 09/97 ರಡಿಯಲ್ಲಿ ವಿಚಾರಣೆ ಕೈಗೊಂಡಿತ್ತು.
ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಚ್ಚಿ ರವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಪಿಐ ಇಮ್ರಾನ್ ಬೇಗ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಸಿಬ್ಬಂದಿಗಳಾದ ಲಿಂಗೇಗೌಡ, ರಾಘವೇಂದ್ರ, ಮತ್ತು ಶಿವಶಂಕರ ಕುಂಬಾರ ರವರು ಸಾಗರದಲ್ಲಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಪ್ರಸ್ತುತ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
PublicNext
31/07/2026 02:22 pm
LOADING...