ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿನಲ್ಲಿ ವಿವೇಕ ಸ್ಮಾರಕ ಲೋಕಾರ್ಪಣೆ - ಮೋದಿ ಆಗಮನಕ್ಕೆ ಸಕಲ ಸಿದ್ಧತೆ

ಮೈಸೂರು : ನಾಳೆ ಮೋದಿ ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಧ್ಯಾಹ್ನ 3.30 ಗಂಟೆಗೆ ಸ್ಮಾರಕ ಉದ್ಘಾಟನೆ ಮಾಡಲಿದ್ದು, ಬಳಿಕ ಯಾದವಗಿರಿ ರಾಮಕೃಷ್ಣ ಶಾಲೆಯ ಮೈದಾನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ 4.30 ಗಂಟೆಯಿಂದ 5 ಗಂಟೆಯವರೆಗೆ ಭಾಷಣ ಮಾಡಲಿದ್ದಾರೆ. ಬಳಿಕ ವಿಶೇಷ ವಿಮಾನದ ಮೂಲಕ ದೆಹಲಿಯತ್ತ ತೆರಳಲಿದ್ದಾರೆ. ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Edited By : Manjunath H D
PublicNext

PublicNext

31/07/2026 10:43 pm

Cinque Terre

15.51 K

Cinque Terre

0

ಸಂಬಂಧಿತ ಸುದ್ದಿ