ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಸ್ನೇಹಿತರೇ ಹಲ್ಲೆ - ಚುಚ್ಚಿ ಚುಚ್ಚಿ ಗಾಯಗೊಳಿಸಿ ವಿಕೃತಿ

ಚಿತ್ರದುರ್ಗ: ಸ್ನೇಹಿತರ ದಿನವೇ ಶಾಲೆಯಲ್ಲಿ ಸ್ನೇಹಿತರೇ ಶಾಲಾ ವಿದ್ಯಾರ್ಥಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹತ್ತನೇ ತರಗತಿ ವಿದ್ಯಾರ್ಥಿ ಪ್ರೀತಂ ಎಂಬ ಬಾಲಕನ ಮೇಲೆ ಹಲ್ಲೆ ಮಾಡಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಇಂದಿರಾಗಾಂಧಿ ಮೊರಾರ್ಜಿ ಶಾಲೆಯಲ್ಲಿ ಘಟನೆ ಜರುಗಿದೆ. ತ್ರಿಜ್ಯ, ಪೆನ್ನಿನಿಂದ ಚುಚ್ಚಿ ಚುಚ್ಚಿ 19ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಕೃತಿ ಮೆರೆದಿದ್ದಾರೆ. ಮಲಗಿದ್ದವನ ಮುಖಕ್ಕೆ ತಣ್ಣೀರು ಎರಚಿ ಅಮಾನವೀಯವಾಗಿ ವರ್ತಿಸಿದ್ದು ಇದೀಗ ಬೆಳಕಿಗೆ ಬಂದಿದೆ.

ಬರೋಬ್ಬರಿ 19ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಾಳು ಪ್ರೀತಂ ಮೇಲೆ ಹಲ್ಲೆ ನಡೆಸಿದ್ದು, ಕಾಲು, ಮುಖ, ಬೆನ್ನು ಸೇರಿ ಹಲವು ಭಾಗಗಳಲ್ಲಿ ಚುಚ್ಚಿದ ಗಾಯಗಳಾಗಿವೆ. ಕಾಲುವೇಹಳ್ಳಿ ಮೂಲದ ಪ್ರೀತಂ ಎಂಬ ಗಾಯಾಳು ವಿದ್ಯಾರ್ಥಿ ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಶಾಲೆಯ ವಾರ್ಡನ್‌ಗೆ ವಿಷಯ ಗೊತ್ತಿದ್ದರೂ ಮುಚ್ಚಿಟ್ಟಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Vinayak Patil
PublicNext

PublicNext

02/08/2026 12:06 pm

Cinque Terre

9.7 K

Cinque Terre

0

ಸಂಬಂಧಿತ ಸುದ್ದಿ