ಚಳ್ಳಕೆರೆ: ತಾಲೂಕಿನ ಕಲಮರಹಳ್ಳಿ ಗ್ರಾಮದ ಸಮೀಪದ ಮಜರೆ ಗ್ರಾಮವಾದ ಜಾಲಿ ಗೊಲ್ಲರಹಟ್ಟಿಯ ಪ್ರಕಾಶ್ ಎಂಬುವರ ಕುರಿಹಟ್ಟಿಗೆ ನುಗ್ಗಿರುವ ನಾಯಿಗಳ ಹಿಂಡು ಹತ್ತಕ್ಕೂ ಹೆಚ್ಚು ಸಣ್ಣ ಕುರಿಮರಿಗಳನ್ನು ಕಚ್ಚಿ ಸಾಯಿಸಿ 4 ಕುರಿಮರಿಗಳನ್ನು ಗಾಯಗೊಳಿಸಿರುವ ಘಟನೆ ಜರುಗಿದೆ.
ಕಷ್ಟಪಟ್ಟು ಸಾಕಿದ್ದ 30 ಕುರಿಮರಿಗಳಲ್ಲಿ, 10 ಕುರಿಮರಿಗಳು ಸಾವು, 4 ಮರಿಗಳು ಗಾಯಗೊಂಡಿದ್ದು ಇದರಿಂದಾಗಿ ಅರವತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ಕುರಿಮರಿಗಳು ನಾಯಿಗಳ ದಾಳಿಯಿಂದ ನಷ್ಟವಾಗಿವೆ. ಮಾಲೀಕ ಪ್ರಕಾಶ್ ಕಣ್ಣೀರು ಹಾಕಿದ್ದು ಸರ್ಕಾರದಿಂದ ಪರಿಹಾರ ಸಿಗಬೇಕಿದೆ.
PublicNext
29/07/2026 06:46 am
LOADING...