ಚಿತ್ರದುರ್ಗ: ಜಮೀನು ಗಲಾಟೆ ವಿಚಾರಕ್ಕೆ ಮಗನೇ ತನ್ನ ತಂದೆಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಂದ್ರಪ್ಪ ಎಂಬವರಿಗೆ 5 ಎಕರೆ ಜಮೀನಿದೆ. ಚಂದ್ರಪ್ಪನವರ ಮಗ ಪ್ರಸನ್ನ ಜಮೀನಿನಲ್ಲಿ ನಾನು ಉಳುಮೆ ಮಾಡ್ತೀನಿ ಅಂತಾ ತನ್ನ ತಂದೆಗೆ ಜಮೀನಿಗೆ ಬಾರದಂತೆ ತಾಕೀತು ಮಾಡಿದ್ದ. ಜಮೀನು ಕೂಡ ಉಳುಮೆ ಮಾಡದಂತೆ ಪಾಳು ಬಿಟ್ಟಿದ್ದ.
ಇಂದು ಮಧ್ಯಾಹ್ನದ ವೇಳೆಗೆ ಚಂದ್ರಪ್ಪ ತಮ್ಮ ಜಮೀನಿಗೆ ಬಂದಿದ್ದರು. ಈ ವೇಳೆ ಚಂದ್ರಪ್ಪ ಸಹೋದರ ಕರಿಬಸಪ್ಪ ಪ್ರಸನ್ನನಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಅನ್ನೋ ಆರೋಪ ಇದೆ. ಇದ್ದಕ್ಕಿದ್ದಂತೆ ಜಮೀನಿಗೆ ಬಂದ ಪ್ರಸನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದು, ಪೊಲೀಸರಿಗೆ ಶರಣಾಗಿದ್ದಾನೆ.
PublicNext
19/07/2026 10:44 pm
LOADING...