ಎನ್.ಆರ್.ಪುರ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಭದ್ರಾ ನದಿ ಭೋರ್ಗರೆಯುತ್ತಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಹೊಳೆಬಾಗಿಲು ಭಾಗದಲ್ಲಿ ಮಳೆಯ ಆರ್ಭಟಕ್ಕೆ ನದಿಯಲ್ಲಿ ಪ್ರವಾಹದ ಮಟ್ಟ ಏರಿಕೆಯಾಗಿದ್ದು, ನದಿ ಪಾತ್ರದ ಸುತ್ತಮುತ್ತಲಿನ ಅಡಕೆ ತೋಟ ಹಾಗೂ ಗದ್ದೆಗಳು ನೀರುಪಾಲಾಗಿವೆ.
ನದಿಯ ಪ್ರಚಂಡ ಹರಿವಿನಿಂದಾಗಿ ಹೊಳೆಬಾಗಿಲು ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೃಷಿ ಭೂಮಿಗೆ ನೀರು ಆವರಿಸಿಕೊಂಡಿದ್ದು, ಬೆಳೆ ಸಂಪೂರ್ಣ ಮುಳುಗಡೆಯಾಗಿದೆ. ದಿಢೀರ್ ಎದುರಾದ ಈ ಜಲಾವೃತ ಸ್ಥಿತಿಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗುವ ಭೀತಿ ಎದುರಾಗಿದ್ದು, ನದಿ ಪಾತ್ರದ ರೈತರು ಸಂಪೂರ್ಣವಾಗಿ ಕಂಗಾಲಾಗಿದ್ದಾರೆ.
Kshetra Samachara
02/08/2026 06:42 pm
LOADING...