ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 17 ವರ್ಷ ಸಂಬಳ ಇಲ್ಲದೆ ದುಡಿದ ಶಿಕ್ಷಕ!- ಹೂಮಳೆಗೈದು ಬೀಳ್ಕೊಡುಗೆ

ಕುಂದಗೋಳ: ಸತತ 17 ವರ್ಷಗಳ ಕಾಲ ಸಂಬಳ ಇಲ್ಲದೆ ಮಕ್ಕಳಿಗೆ ಶಿಕ್ಷಣ ಧಾರೆ ಎರೆದ ಶಿಕ್ಷಕರೋರ್ವರಿಗೆ ಹೂ ಮಳೆ ಸುರಿದು ಅದ್ದೂರಿ ಸೇವಾ ನಿವೃತ್ತಿ ಬೀಳ್ಕೊಡುಗೆ ನೀಡಲಾಗಿದೆ.

ಹೌದು ! ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಬಸವೇಶ್ವರ ಪ್ರೌಢ ಶಾಲೆ ಅನುದಾನಿತ ಆಡಳಿತಕ್ಕೆ ಒಳಪಡುವ ಮುನ್ನ 1991 ರಿಂದ ಸತತ 17 ವರ್ಷಗಳ‌ ಕಾಲ ಸಂಬಳ ಇರಲಾರದೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಿಕ್ಷಕ ವೃತ್ತಿ ಸೇವೆಗೈದ ಸಿ.ವಿ.ಹಿರೇಮಠ ಅವರನ್ನು ಗ್ರಾಮಸ್ಥರು ಹೂ ಮಳೆ ಸುರಿದು ಬೀಳ್ಕೊಟ್ಟರು.

2026 ಜುಲೈ 31 ರಂದು ಸೇವಾ ನಿವೃತ್ತಿ ಹೊಂದಿದ ಸಿ.ವಿ.ಹಿರೇಮಠ ಅವರಿಗೆ 2007 ರಲ್ಲಿ ಅನುದಾನಿತ ಶಾಲೆ ಶಿಕ್ಷಕ ವೇತನ ಲಭಿಸಿತ್ತು, ಅದಕ್ಕೂ ಮುನ್ನ ಸಂಬಳ ಇರಲಾರದೆ ಸೇವೆ ಮಾಡಿದ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು ಶಿಕ್ಷಕರ ಅನುಪಮ ಸೇವೆಯನ್ನು ಹಾಡಿ ಹೊಗಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಅಭಿನವ ಕಲ್ಯಾಣಪುರ ಬಸವಣ್ಣನವರು ಅಲಂಕರಿಸಿ, ಶಿಕ್ಷಕರಿಗೆ ಆಶೀರ್ವದಿಸಿದರು. ಶಾಲೆಯ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳು ಶಿಕ್ಷಕರ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಶಿಕ್ಷಕರ ನಿವೃತ್ತಿ ಸಮಾರಂಭಕ್ಕೆ ತಯಾರಿಸಿದ ಹಬ್ಬದ ಅಡುಗೆಯಂತಹ ಭೋಜನ ವ್ಯವಸ್ಥೆಗೆ ಅಭಿನವ ಕಲ್ಯಾಣಪುರ ಬಸವಣ್ಣನವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಭೂ ದಾನಿಗಳು, ಶಾಲಾ ಸಲಹಾ ಮಂಡಳಿ, ಗ್ರಾಮಸ್ಥರು, ಶರಣರನ್ನು ಗೌರವಿಸಲಾಯಿತು.

-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/08/2026 08:06 pm

Cinque Terre

43.67 K

Cinque Terre

1

ಸಂಬಂಧಿತ ಸುದ್ದಿ