ಸಕಲೇಶಪುರ (ಹಾಸನ): ಸಕಲೇಶಪುರ ತಾಲೂಕಿನ ಕಿರುಹುಣಸೆ ಗ್ರಾಮದ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ, ಸಕಲೇಶಪುರ ವಲಯ ಅರಣ್ಯಾಧಿಕಾರಿಗಳ ತಂಡವು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರು ಹಾಗೂ ಕಾಫಿ ತೋಟದ ಕಾರ್ಮಿಕರಿಗೆ ಜಾಗೃತಿ ಮೂಡಿಸಿತು.
ಈ ವೇಳೆ ಗ್ರಾಮಸ್ಥರೊಂದಿಗೆ ಮಾತನಾಡಿದ ಅಧಿಕಾರಿಗಳು, "ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುವ ಮುನ್ನ ಕಡ್ಡಾಯವಾಗಿ ಅರಣ್ಯ ಇಲಾಖೆಯಿಂದ ಕಾಡಾನೆಗಳ ಪ್ರಸ್ತುತ ಚಲನವಲನದ ಮಾಹಿತಿ ಪಡೆದುಕೊಂಡೇ ಮುನ್ನಡೆಯಬೇಕು. ಒಂದು ವೇಳೆ ಎಲ್ಲಾದರೂ ಕಾಡಾನೆಗಳು ಪ್ರತ್ಯಕ್ಷವಾದರೆ ಅವುಗಳ ಸಮೀಪ ಹೋಗಿ ಪ್ರಚೋದಿಸದೆ, ಸುರಕ್ಷಿತ ಅಂತರ ಕಾಯ್ದುಕೊಂಡು ತಕ್ಷಣವೇ ಇಲಾಖೆಗೆ ಮಾಹಿತಿ ತಲುಪಿಸಬೇಕು" ಎಂದು ಮನವಿ ಮಾಡಿದರು.
ಕಾಡಾನೆ-ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗೂ ತೋಟದ ಕಾರ್ಮಿಕರು ಅರಣ್ಯ ಇಲಾಖೆ ನೀಡುವ ಮುನ್ನೆಚ್ಚರಿಕೆ ಸೂಚನೆಗಳನ್ನು ತಪ್ಪದೇ ಪಾಲಿಸಿ ಜಾಗರೂಕರಾಗಿರಬೇಕೆಂದು ಅರಣ್ಯ ಸಿಬ್ಬಂದಿ ಸ್ಪಷ್ಟಪಡಿಸಿದರು.
Kshetra Samachara
04/08/2026 05:07 pm
LOADING...