ಚಾಮರಾಜನಗರ : ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಬಣ್ಣಾರಿ ಸಮೀಪ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ಒಂಟಿ ಸಲಗವೊಂದು ದಿಢೀರ್ ತಡೆದು ನಿಲ್ಲಿಸಿದ ಘಟನೆ ನಡೆದಿದೆ.
ರಸ್ತೆಯ ಮಧ್ಯದಲ್ಲೇ ನಿಂತ ಆನೆಯು ಲಾರಿಯಲ್ಲಿದ್ದ ಕಬ್ಬನ್ನು ತನ್ನ ಸೊಂಡಿಲಿನಿಂದ ಎಳೆದು ತಿನ್ನಲು ಆರಂಭಿಸಿತು. ಇದರಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲಾಗಿ ನಿಂತು ಪ್ರಯಾಣಿಕರು ಆತಂಕ ಹಾಗೂ ಕುತೂಹಲದಿಂದ ವೀಕ್ಷಿಸುವಂತಾಯಿತು.
PublicNext
04/08/2026 05:31 pm
LOADING...