ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಮಸಿ ಬಳಿಯುವ ಮುನ್ನ ಎಚ್ಚೆತ್ತುಕೊಳ್ಳಿ - ವರ್ತಕರಿಗೆ ನಗರಸಭೆ ಪೌರಾಯುಕ್ತರ ಎಚ್ಚರಿಕೆ !

ಚಿಕ್ಕಮಗಳೂರು : ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹಾಗೂ ಜಾಹೀರಾತು ಫಲಕಗಳಲ್ಲಿ ಮುಂದಿನ ಒಂದು ವಾರದೊಳಗೆ ಸರ್ಕಾರದ ನಿಯಮದಂತೆ ಮೇಲ್ಭಾಗದಲ್ಲಿ ಶೇ. 60 ರಷ್ಟು ಕನ್ನಡ ಹಾಗೂ ಕೆಳಭಾಗದಲ್ಲಿ ಶೇ. 40 ರಷ್ಟು ಆಂಗ್ಲ ಭಾಷೆ ಬಳಸುವುದು ಕಡ್ಡಾಯವಾಗಿದೆ. ನಿಯಮ ಪಾಲಿಸದ ಉದ್ಯಮಿಗಳ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ಕ್ರಮ ಜರುಗಿಸುವುದಾಗಿ ಪೌರಾಯುಕ್ತ ಬಿ. ಸಿ. ಬಸವರಾಜು ಎಚ್ಚರಿಸಿದ್ದಾರೆ.

ಹಲವು ವರ್ಷಗಳಿಂದ ನೋಟಿಸ್ ಹಾಗೂ ಪ್ರತಿಭಟನೆಗಳ ಮೂಲಕ ಅರಿವು ಮೂಡಿಸಿದರೂ ನಿಯಮ ಉಲ್ಲಂಘನೆ ಮುಂದುವರಿದಿದ್ದು, ಜುಲೈ 25 ರಂದು ಜಾಥಾ ಸಹ ನಡೆಸಲಾಗಿತ್ತು. ನಿಯಮ ಪಾಲಿಸದಿದ್ದರೆ ಮಸಿ ಬಳಿಯುವ ಉಗ್ರ ಪ್ರತಿಭಟನೆ ನಡೆಸುವುದಾಗಿ ಕನ್ನಡ ಸೇನೆಯು ನಗರಸಭೆಗೆ ಪತ್ರ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಂತಿಮ ಮುನ್ಸೂಚನೆ ನೀಡಲಾಗಿದೆ.

ನಗರಸಭಾ ವ್ಯಾಪ್ತಿಯ ಮಾರ್ಕೆಟ್ ರಸ್ತೆಗೆ 'ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ' ಎಂದು ಪುನರ್ನಾಮಕರಣ ಮಾಡಲಾಗಿದೆ. ಈ ರಸ್ತೆಯಲ್ಲಿರುವ ಎಲ್ಲಾ ವಾಣಿಜ್ಯ ಮಳಿಗೆಗಳ ಮಾಲೀಕರು ತಮ್ಮ ನಾಮಫಲಕಗಳಲ್ಲಿರುವ ವಿಳಾಸದಲ್ಲಿ ತಕ್ಷಣವೇ 'ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ' ಎಂದು ಬದಲಾಯಿಸಿಕೊಳ್ಳಲು ಪೌರಾಯುಕ್ತರು ಸೂಚಿಸಿದ್ದು, ನಿರ್ಲಕ್ಷ್ಯ ವಹಿಸಿದರೆ ನಗರಸಭೆಯಿಂದಲೇ ಅಂತಹ ಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Edited By : PublicNext Desk
PublicNext

PublicNext

05/08/2026 08:49 pm

Cinque Terre

2.77 K

Cinque Terre

0

ಸಂಬಂಧಿತ ಸುದ್ದಿ