ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಚಲಿಸುತ್ತಿದ್ದ ಆಟೋಗೆ ಬೀದಿ ನಾಯಿ ಅಡ್ಡಬಂದು ಆಟೋ ಪಲ್ಟಿ - ಪ್ರಯಾಣಿಕರಿಗೆ ಗಾಯ !

ಚಿಕ್ಕಮಗಳೂರು : ಚಲಿಸುತ್ತಿದ್ದ ಆಟೋಗೆ ದಿಢೀರನೆ ಬೀದಿ ನಾಯಿಯೊಂದು ಅಡ್ಡಬಂದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ಆಟೋ ರಸ್ತೆಯಲ್ಲೇ ಪಲ್ಟಿಯಾಗಿ ಚಾಲಕ ಹಾಗೂ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ನಗರದ ವಿಜಯಪುರ ರಸ್ತೆಯ ಜೆವಿಎಸ್ ಶಾಲೆ ಮುಂಭಾಗ ನಡೆದಿದೆ.

ಕೆಜಿಎನ್ ಸರ್ಕಲ್‌ನಿಂದ ಗೌರಿಕಾಲುವೆ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಸ್ತೆಗೆ ದಿಢೀರನೆ ನಾಯಿ ಅಡ್ಡಬಂದಿದ್ದರಿಂದ, ಅದನ್ನು ತಪ್ಪಿಸಲು ಚಾಲಕ ಅಸ್ಲಂ ಅಹಮ್ಮದ್ ಖಾನ್ ತಕ್ಷಣ ಬ್ರೇಕ್ ಹಾಕಿದ್ದು, ಆಟೋ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿಬಿದ್ದಿದೆ.

ಅಪಘಾತದಲ್ಲಿ ಚಾಲಕ ಅಸ್ಲಂ ಹಾಗೂ ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಚಿಕ್ಕಮಗಳೂರಿನ ಎಂ.ಜಿ. ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : PublicNext Desk
PublicNext

PublicNext

05/08/2026 10:40 pm

Cinque Terre

1.94 K

Cinque Terre

0

ಸಂಬಂಧಿತ ಸುದ್ದಿ