ಮಳೆ ಕೆಲವರಿಗೆ ಕಾಫಿ ಕುಡಿಯುವ ಸಂಭ್ರಮ ಇನ್ನೂ ಕೆಲವರಿಗೆ ಮನೆಯ ಕಿಟಕಿಯಿಂದ ಆಸ್ವಾದಿಸುವ ಸೊಗಸು ಆದರೆ ಅದೇ ಮಳೆ, ಇನ್ನೊಬ್ಬರ ಬದುಕಿನಲ್ಲಿ ಹೊಟ್ಟೆಪಾಡಿನ ಹೋರಾಟ. ಮಳೆಯಲ್ಲೇ ಕೈಯಲ್ಲಿ ಹೂಗುಚ್ಛ ಹಿಡಿದು ನಿಂತಿರುವ ಪುಟ್ಟ ಹುಡುಗಿ ಮಳೆ ನಿಲ್ಲುವವರೆಗೂ ಕಾಯುವ ಅವಕಾಶವೂ ಆಕೆಗಿಲ್ಲ.
ಯಾಕೆಂದರೆ, ಇಂದು ಹೂಗಳು ಮಾರಾಟವಾಗದಿದ್ದರೆ ಮಾತ್ರ ಮನೆಯ ಒಲೆ ಉರಿಯುತ್ತದೆ. ಇಲ್ಲಿ
ಮಳೆಯಿಂದ ನೆನೆಯುತ್ತಿರುವುದು ಆಕೆಯ ಬಟ್ಟೆಗಳಷ್ಟೇ ಅಲ್ಲ. ಆಕೆಯ ಕನಸುಗಳೂ ಕೂಡ.
ಒಂದೆಡೆ ಛತ್ರಿ ಹಿಡಿದು ವೇಗವಾಗಿ ಸಾಗುವ ಜನ. ಇನ್ನೊಂದೆಡೆ, "ಒಂದು ಹೂಗುಚ್ಛವಾದರೂ ಕೊಳ್ಳಿ" ಎಂಬ ಮೌನದ ಬೇಡಿಕೆಯೊಂದಿಗೆ ನಿಂತಿರುವ ಆ ಪುಟ್ಟ ಕಣ್ಣುಗಳು. ಬದುಕು ಎಲ್ಲರದ್ದೂ ಒಂದೇ ಆಗಿರುವುದಿಲ್ಲ.
ಕೆಲವರಿಗೆ ಮಳೆ ನೆನಪುಗಳನ್ನು ಕೊಡುತ್ತದೆ.ಇನ್ನೂ ಕೆಲವರಿಗೆ ಹೊಟ್ಟೆ ತುಂಬಿಸಿಕೊಳ್ಳುವ ಹೋರಾಟವನ್ನು ಕಲಿಸುತ್ತದೆ.
ಆ ಹೂಗುಚ್ಛಗಳನ್ನು ಬೆಳಗ್ಗೆಯಿಂದ ಯಾರೂ ಖರೀದಿಸದಿರುವುದರಿಂದ ಒಣಗಿಬಿಡುವ ಮುನ್ನ ಯಾರಾದರೂ ತೆಗೆದುಕೊಳ್ಳಬಹುದೇ ಎನ್ನುವ ಆಕೆಯ ನೋಟದಲ್ಲೇ ಎಲ್ಲವೂ ಅಡಗಿದೆ. ಅವಳದ್ದು ಶಾಲೆಗೆ ಹೋಗುವ ವಯಸ್ಸು. ಪುಸ್ತಕ ಹಿಡಿಯಬೇಕಿದ್ದ ಕೈಗಳಲ್ಲಿ ಇಂದು ಹೂಗುಚ್ಛಗಳ ಭಾರ ಅದ್ಕೆ ಹೇಳುವುದು ಬದುಕು ಎಲ್ಲರದ್ದೂ ಒಂದೇ ಆಗಿರುವುದಿಲ್ಲ.
ವಿಜಯಲಕ್ಷ್ಮೀ ಬಿ...
PublicNext
06/08/2026 09:19 pm
LOADING...