ಹಾವೇರಿ: ಗಣೇಶ ಚತುರ್ಥಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಾರುಕಟ್ಟೆಯಲ್ಲಿ ಕಲಾವಿದರು ವೈವಿಧ್ಯಮಯ ಗಣೇಶ ಮೂರ್ತಿಗಳನ್ನು ಭಕ್ತರಿಗಾಗಿ ಸಿದ್ಧಪಡಿಸಿದ್ದಾರೆ.
ಆದರೆ ಪ್ರತಿವರ್ಷದಂತೆ ಈ ವರ್ಷವೂ ಸಹ ಮಣ್ಣಿನ ಮೂರ್ತಿ ತಯಾರಿಸುವ ಕಲಾವಿದರಿಗೆ ಪಿಒಪಿ (PoP) ಗಣೇಶ ಮೂರ್ತಿಗಳ ಕಾಟ ಶುರುವಾಗಿದೆ. ದೂರದೂರುಗಳಿಂದ ಕಡಿಮೆ ವೆಚ್ಚದಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ತಂದು, ಜನಸಂಚಾರವಿಲ್ಲದ ಜಾಗಗಳಲ್ಲಿ ಅವುಗಳಿಗೆ ಅಂತಿಮ ಹಂತದ ಬಣ್ಣ ಮತ್ತು ಮೆರುಗು ನೀಡಲಾಗುತ್ತಿದೆ.
ಕಡಿಮೆ ದರದಲ್ಲಿ ಅತ್ಯಂತ ಆಕರ್ಷಕವಾದ ಪಿಒಪಿ ಗಣೇಶ ಮೂರ್ತಿಗಳು ಸಿಗುತ್ತಿರುವುದರಿಂದ, ಮಣ್ಣಿನಿಂದ ತಯಾರಿಸಿದ ನೈಜ ಮೂರ್ತಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಸ್ಥಳೀಯ ಮಣ್ಣಿನ ಕಲಾವಿದರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
PublicNext
02/09/2026 03:30 pm
LOADING...