ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ರಾಜ್ಯಾದ್ಯಂತ ಕ್ವಾರಿ ಮಾಲೀಕರಿಗೆ ನೋಟಿಸ್; ಕಾನೂನಾತ್ಮಕ ಕ್ರಮದ ಭರವಸೆ ನೀಡಿದ ಸಚಿವ ರುದ್ರಪ್ಪ ಲಮಾಣಿ

​ಹಾವೇರಿ: ರಾಜ್ಯದ ಎಲ್ಲಾ ಕಲ್ಲು ಕ್ವಾರಿ ಮಾಲೀಕರಿಗೂ ಸರ್ಕಾರದಿಂದ ದಂಡ ವಿಧಿಸಲಾಗಿದೆ ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

​ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, "ಕಲ್ಲು ಕ್ವಾರಿ ದಂಡದ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ಏನೆಲ್ಲಾ ಅವಕಾಶಗಳಿವೆ ಎಂಬುದನ್ನು ಪರಿಶೀಲಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ನಮಗೆ ವಹಿಸಿ ಕೊಡುವುದಕ್ಕಿಂತ ಮುಂಚಿನ ಹಾಗೂ ನಾವು ಕ್ವಾರಿ ಲೀಸ್‌ಗೆ ಪಡೆದ ನಂತರದ ಅವಧಿಯ ರಾಯಲ್ಟಿಯನ್ನೆಲ್ಲ ಒಟ್ಟಿಗೆ ಸೇರಿಸಿ ದಂಡ ಹಾಕಿದ್ದಾರೆ" ಎಂದು ವಿವರಿಸಿದರು.

​"ಇಲಾಖೆಯಿಂದ ನಮಗೆ 'ಒನ್ ಟೈಮ್ ಸೆಟಲ್‌ಮೆಂಟ್' (ಒಂದೇ ಬಾರಿಯ ಇತ್ಯರ್ಥ) ಎಂದು ನೋಟಿಸ್ ನೀಡಲಾಗಿದೆಯೇ ಹೊರತು ದಂಡ ವಿಧಿಸಿಲ್ಲ. ರಾಜ್ಯಾದ್ಯಂತ ಎಲ್ಲಾ ಕ್ವಾರಿ ಮಾಲೀಕರಿಗೂ ಇದೇ ರೀತಿ ನೋಟಿಸ್‌ ಬಂದಿದ್ದು, ಅವರಲ್ಲಿ ನಾನು ಕೂಡ ಒಬ್ಬ" ಎಂದು ಸಚಿವರು ಸ್ಪಷ್ಟಪಡಿಸಿದರು.

Edited By :
PublicNext

PublicNext

19/09/2026 10:43 pm

Cinque Terre

4.85 K

Cinque Terre

0

ಸಂಬಂಧಿತ ಸುದ್ದಿ