ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ; ಗೋವಿಂದ ಕಾರಜೋಳ ವಾದ

ಹಾವೇರಿ: ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ನಡೆದಿರುವ ಇಡಿ ದಾಳಿ ರಾಜಕೀಯ ಪ್ರೇರಿತ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಅಭಿಪ್ರಾಯ ಪಟ್ಟಿದ್ದಾರೆ‌.

ಹಾವೇರಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು 79 ವರ್ಷಗಳಾಯಿತು. ಈ 79 ವರ್ಷಗಳಲ್ಲಿ 65 ವರ್ಷಗಳ ವರೆಗೆ ಕಾಂಗ್ರೆಸ್ಸಿನವರೇ ಆಡಳಿತ ಮಾಡಿದ್ದಾರೆ ಎಂದರು.

ನೆಹರು ಅವರ ಕಾಲದಲ್ಲಿ ಸಹ ಇಡಿ, ಐಟಿ ರೇಡ್, ಸಿಬಿಐ ದಾಳಿ ಆಗಿವೆ. ಸೀರಿಯಸ್ ಮೋಸದ ಪ್ರಕರಣಗಳ ತನಿಖೆ ಸಹ ನಡೆದಿದೆ. ಅವನ್ನೆಲ್ಲ ರಾಜಕೀಯ ಎನ್ನಲು ಸಾಧ್ಯವೇ? ಎಂದು ಕಾರಜೋಳ ಪ್ರಶ್ನಿಸಿದರು.

ಇಡಿ, ಸಿಬಿಐ, ಐಟಿ ಇವೆಲ್ಲ ಸಂವಿಧಾನಿಕ ಸಂಸ್ಥೆಗಳು. ಇಡಿ ಯಾರ ಮುಲಾಜಿಗೆ ಒತ್ತಡಕ್ಕೂ ಮಣಿಯುವುದಿಲ್ಲ, ಕಾಯುವುದಿಲ್ಲ. ಅವರ ಹತ್ತಿರ ದಾಖಲೆಗಳಿಲ್ಲದೆ ಅವರು ಏನೂ ಮಾಡುವುದಿಲ್ಲ ಎಂದು ಗೋವಿಂದ ಕಾರಜೋಳ ತಿಳಿಸಿದರು.

Edited By :
PublicNext

PublicNext

11/09/2026 09:00 pm

Cinque Terre

10.72 K

Cinque Terre

0

ಸಂಬಂಧಿತ ಸುದ್ದಿ