ಸವಣೂರು : ಇಂದು ಸವಣೂರು ತಾಲೂಕಿನ ಎಲ್ಲ ರೈತ ಬಾಂಧವರು ಸೇರಿ ಎಸಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ತಾಲೂಕಿನಲ್ಲಿ 24 ಕೆರೆಗಳು ಇನ್ನೂ ತುಂಬಿಲ್ಲ. ತಕ್ಷಣ ಕೆರೆ ತುಂಬಿಸುವ ಕೆಲಸ ಪ್ರಾರಂಭಿಸಬೇಕು ಎಂದು ರೈತ ಸಂಘದ ವತಿಯಿಂದ ಖಡಕ್ ಎಚ್ಚರಿಕೆ ನೀಡಿದ್ದೇವೆ. ಅವರು ಇಂದಿನಿಂದಲೇ ಕೆಲಸ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ರಾಜ್ಯ ರೈತ ಸಂಘದ ಮುಖಂಡರಾದ ಚನ್ನಪ್ಪ ಪೂಜಾರ ತಿಳಿಸಿದರು.
ಇದೇ ವೇಳೆ ಹಾವೇರಿ ಜಿಲ್ಲೆಯಲ್ಲಿ ಕಬ್ಬಿನ ಕಾರ್ಖಾನೆಗಳನ್ನು ಪ್ರಾರಂಭಿಸಬಾರದು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಬೆಳೆಗಳಿಗೆ ನಿಗದಿತ ದರ ಸಿಗಬೇಕು. ಕಬ್ಬಿನ ಬಿಲ್ ರೂ. 5,500 ಆಗಬೇಕು, MSP ರೂ. 3,160 ಆಗಬೇಕು ಮತ್ತು ರೂ. 100 ಕಮರ್ಷಿಯಲ್ ದರ ಸೇರಿ ಸ್ವಾಮಿನಾಥನ್ ವರದಿ ಅನ್ವಯ ಎಲ್ಲ ಬೆಳೆಗಳಿಗೆ ದರ ಸಿಗಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಗಳ ಈಡೇರಿಕೆಗಾಗಿ ಬರುವ ಸೆಪ್ಟೆಂಬರ್ 29ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆ ಮುಂದೆ ಸುಮಾರು 5 ಲಕ್ಷ ಜನ ಸೇರಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದೇವೆ. ಅಲ್ಲಿಯವರೆಗೆ ಉತ್ತರ ಕರ್ನಾಟಕದ ಯಾವುದೇ ಕಾರ್ಖಾನೆಗಳನ್ನು ಪ್ರಾರಂಭಿಸಬಾರದು. ಇದು ಜಿಲ್ಲಾಧಿಕಾರಿ ಮತ್ತು ಸಕ್ಕರೆ ಆಯುಕ್ತರ ಜವಾಬ್ದಾರಿ. ಒಂದು ವೇಳೆ ಉದಾಸೀನ ಮಾಡಿ ಕಾರ್ಖಾನೆ ಪ್ರಾರಂಭಿಸಿದರೆ ಕಾನೂನು ಸುವ್ಯವಸ್ಥೆ ಹದಗೆಡಲು ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡುತ್ತೇವೆ ಎಂದು ಹೇಳಿದರು.
ವರದಿ: ಪವನ್, ಸವಣೂರು
PublicNext
20/09/2026 02:53 pm
LOADING...