ಹಾವೇರಿ: ಜಿಲ್ಲೆಯ ಕಬ್ಬು ಬೆಳೆಗಾರರು ಇದೀಗ ಹೋರಾಟಕ್ಕೆ ಇಳಿದಿದ್ದಾರೆ. ಪ್ರತಿವರ್ಷ ನಮಗೆ ಕಬ್ಬು ದರದಲ್ಲಿ, ಕಬ್ಬಿನ ತೂಕದಲ್ಲಿ ಮತ್ತು ಕಬ್ಬಿನಲ್ಲಿನ ಸಕ್ಕರೆ ಇಳುವರಿಯಲ್ಲಿ ಮೋಸವಾಗುತ್ತಿದೆ ಎಂದು ಕಬ್ಬು ಬೆಳೆಗಾರರು ಆರೋಪಿಸಿದ್ದಾರೆ.
ಪ್ರಸ್ತುತ ವರ್ಷ ಸಕ್ಕರೆ ಬೆಲೆ ಮತ್ತು ಬೆಲ್ಲದ ಬೆಲೆ 75 ರೂಪಾಯಿ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿಟನ್‌ಗೆ 5500 ರೂಪಾಯಿ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಪ್ರಸ್ತುತ ವರ್ಷ ಬರಗಾಲದ ಛಾಯೆ ಆವರಿಸಿದೆ, ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ, ಅಂತರ್ಜಲಮಟ್ಟ ಕುಸಿದಿದೆ, ಕಷ್ಟಪಟ್ಟು ಕಬ್ಬು ಬೆಳೆದಿದ್ದೇವೆ. ಕಬ್ಬಿಗೆ ಕನಿಷ್ಠ ಟನ್‌ಗೆ 5500 ರೂಪಾಯಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
PublicNext
19/09/2026 10:57 am
LOADING...