ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ; ಇಮ್ಮಡಿ ರಾಜಧನ ವಸೂಲಿ ನೀತಿ: ಆತಂಕದಲ್ಲಿ ಕ್ರಷರ್ ಕ್ವಾರಿ ಮಾಲಕರು

ಹಾವೇರಿ ಜಿಲ್ಲೆಯಲ್ಲಿರುವ 53 ಕ್ರಷರ್ ಮತ್ತು ಕ್ವಾರಿ ಮಾಲಿಕರು ಈಗ ಆತಂಕದಲ್ಲಿದ್ದಾರೆ. ಇವರ ಆತಂಕಕ್ಕೆ ಕಾರಣ ಸರ್ಕಾರದ ಇಮ್ಮಡಿ ರಾಜಧನ ವಸೂಲಿ ನೀತಿ.

ನಾವು ಉತ್ಪಾದಿಸುವ ಕಲ್ಲಿನ ಒಂದೇ ಉತ್ಪನ್ನಕ್ಕೆ ಸರ್ಕಾರ ಎರಡು ಬಾರಿ ರಾಜಧನ ವಸೂಲಿ ಮಾಡುತ್ತಿದೆ ಎಂದು ಮಾಲಿಕರು ಆರೋಪಿಸಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಾದ ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ಇತರ ಇಲಾಖೆಗಳ ಕಾಮಗಾರಿಗಳಲ್ಲಿ ರಾಜಧನ ಕಡಿತ ಮಾಡಲಾಗುತ್ತಿದೆ.

ಸರ್ಕಾರ ಈ ಕ್ರಮ ಖಂಡಿಸಿ ಶುಕ್ರವಾರದಿಂದ ಕಲ್ಲು ಕ್ವಾರಿ ಬಂದ್ ಮಾಡುವುದಾಗಿ ಕ್ವಾರಿ ಮಾಲೀಕರು ತಿಳಿಸಿದ್ದಾರೆ. ಸರ್ಕಾರ ತನ್ನ ಇಮ್ಮಡಿ ರಾಜಧನ ವಸೂಲಿ ನಿಲ್ಲಿಸುವವರೆಗೆ ಪ್ರತಿಭಟನೆ ನಡೆಸುವುದಾಗಿ ಮಾಲೀಕರು ಪಟ್ಟು ಹಿಡಿದಿದ್ದಾರೆ.

Edited By :
PublicNext

PublicNext

18/09/2026 01:18 pm

Cinque Terre

3.6 K

Cinque Terre

0

ಸಂಬಂಧಿತ ಸುದ್ದಿ