ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ರುದ್ರಪ್ಪ ಲಮಾಣಿ ಎದುರೇ ಸರ್ಕಾರದ ವಿರುದ್ಧ ಬಿಸಿ ಪಾಟೀಲ್ ವಾಗ್ದಾಳಿ

ಹಾವೇರಿ ಜಿಲ್ಲಾಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮುಂದೆ ಮಾಜಿ ಸಚಿವ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ನಡೆದಿದೆ. ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಚಿವ ಬಿಸಿ ಪಾಟೀಲ್ ಕಿಡಿಕಾರಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡದಿದ್ದಕ್ಕೆ ಬಿ.ಸಿ.ಪಾಟೀಲ್ ಪ್ರತಿಭಟನೆ ನಡೆಸುತ್ತಿದ್ದರು. ನೂರಾರು ಕಾರ್ಯಕರ್ತರು, ರೈತರು ಇದಕ್ಕೆ ಸಾಥ್ ನೀಡಿದ್ದರು.

ಪ್ರಜಾಸೇವೆ ಕಾರ್ಯಕ್ರಮದ ನಿಮಿತ್ತ ಹಿರೇಕೆರೂರಿಗೆ ಆಗಮಿಸಿದ್ದ ರುದ್ರಪ್ಪ ಲಮಾಣಿ ಪ್ರತಿಭಟನಾ ನಿರತ ಬಿಸಿ ಪಾಟೀಲ್ ಬಳಿ ಮನವಿ ಸ್ವೀಕರಿಸಲು ಬಂದಿದ್ದರು.ಈ ಸಂದರ್ಭದಲ್ಲಿ ಬಿ.ಸಿ.ಪಾಟೀಲ್ ರುದ್ರಪ್ಪ ಲಮಾಣಿ ಮುಂದೆ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Edited By :
PublicNext

PublicNext

19/09/2026 05:22 pm

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ