ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಸಿಯೂಟ ತಯಾರಕರಿಗೆ ಮೂರು ತಿಂಗಳಿಂದ ಗೌರವಧನ ಬಾಕಿ: ತಹಶೀಲ್ದಾರರಿಗೆ ಮನವಿ

ಸವಣೂರು : ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ಸುಮಾರು ಮೂರು ತಿಂಗಳಿಂದ ಸರ್ಕಾರದ ಗೌರವಧನ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಗೌರವಧನ ಬಾಕಿ ಇರುವ ಹಿನ್ನೆಲೆಯಲ್ಲಿ ಬಿಸಿಯೂಟ ತಯಾರಕರು ಹಾಗೂ AITUC ತಾಲೂಕು ಸಮಿತಿ ವತಿಯಿಂದ ಇಂದು ಸವಣೂರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬಿಸಿಯೂಟ ತಯಾರಕರು ಕಡಿಮೆ ಗೌರವಧನದಲ್ಲಿ ಶಾಲಾ ಮಕ್ಕಳಿಗೆ ಪ್ರತಿದಿನವೂ ಬಿಸಿಯೂಟ ತಯಾರಿಸಿ ನೀಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಹಲವು ತಿಂಗಳುಗಳಿಂದ ಗೌರವಧನ ಪಾವತಿಯಾಗದಿರುವುದರಿಂದ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸರ್ಕಾರವು ಬಾಕಿ ಇರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಿ, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಗೌರವಧನ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಬಿಸಿಯೂಟ ತಯಾರಕರು ಹಾಗೂ AITUC ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಪವನ್, ಸವಣೂರು

Edited By : Vinayak Patil
PublicNext

PublicNext

20/09/2026 03:05 pm

Cinque Terre

1.29 K

Cinque Terre

0

ಸಂಬಂಧಿತ ಸುದ್ದಿ