ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

ಹಾವೇರಿ : ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಾಗೋಡ ಗ್ರಾಮದ ಪ್ಲಾಟ್‌ನ ಮಹಿಳೆಯರು ಶುಕ್ರವಾರ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗಮನಸೆಳೆದರು. ಪಟ್ಟಾಕ್ಕಾಗಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು, ಶುಕ್ರವಾರ ಬುತ್ತಿ ಕಟ್ಟಿಕೊಂಡು ಬರುವ ಮೂಲಕ ಪ್ರತಿಭಟನೆ ನಡೆಸಿದರು.

ಮಾಗೋಡ ಪ್ಲಾಟ್‌ನಿಂದ ಬುತ್ತಿ ಕಟ್ಟಿಕೊಂಡು ಬಂದ ಮಹಿಳೆಯರು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಾಗೋಡ ಪ್ಲಾಟ್‌ನಲ್ಲಿ ನಾವು ವಾಸಿಸುತ್ತಿದ್ದು, ನಾಲ್ಕು ದಶಕಗಳೇ ಕಳೆದಿದ್ದರೂ ತಮಗೆ ಪಟ್ಟಾ ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮದ 80ಕ್ಕೂ ಅಧಿಕ ಕುಟುಂಬಗಳಿಗೆ ಪಟ್ಟಾ ಸಿಕ್ಕಿಲ್ಲ. ಪರಿಣಾಮ, ನಮಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ಮಹಿಳೆಯರು ಆರೋಪಿಸಿದರು. ಗ್ರಾಮದಲ್ಲಿ ಕಡುಬಡವರು, ಕೂಲಿ ಹಾಗೂ ಕೃಷಿ ಕೆಲಸ ಮಾಡುವ ಕುಟುಂಬಗಳಿದ್ದು, ಪಟ್ಟಾ ನೀಡುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿದರು.

Edited By :
PublicNext

PublicNext

18/09/2026 09:55 pm

Cinque Terre

12.68 K

Cinque Terre

0

ಸಂಬಂಧಿತ ಸುದ್ದಿ