ಶಿಗ್ಗಾವಿ: ಗ್ರಾಹಕರಿಗೆ ಅವಶ್ಯಕತೆಯ ಸಮಯಕ್ಕೆ ಹಣ ಒದಗಿಸಬೇಕಾದ ಶಿಗ್ಗಾವಿ ತಾಲೂಕಿನ ಹನುಮರಹಳ್ಳಿ ಗ್ರಾಮದಲ್ಲಿರುವ ಯೂನಿಯನ್ ಬ್ಯಾಂಕಿನ ಎಟಿಎಂ ಕಳೆದ 6 ತಿಂಗಳುಗಳಿಂದ ಬಾಗಿಲು ಮುಚ್ಚಿದ್ದು, ಇಲ್ಲಿಗೆ ಬರುವ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಕಳೆದ 6 ತಿಂಗಳುಗಳ ಹಿಂದೆ ಕಳ್ಳರು ರಾತ್ರಿ ಸಮಯದಲ್ಲಿ ಗ್ಯಾಸ್ ಕಟರ್‌ನಿಂದ ಎಟಿಎಂ ಮುರಿದು ಸುಮಾರು 4 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿದ್ದರು. ಆದರೆ ಇದೀಗ ಆರು ತಿಂಗಳು ಕಳೆದರೂ ಎಟಿಎಂ ಮಾತ್ರ ಇನ್ನೂ ವಹಿವಾಟಿಗೆ ಪೂರಕವಾಗಿಲ್ಲ. ಅಲ್ಲದೆ, ಇಲ್ಲಿಗೆ ಬರುವ ಗ್ರಾಹಕರು ಹೊಸ ಎಟಿಎಂ ನಂಬರ್ ಜನರೇಟ್ ಮಾಡಲು ದೂರದ ಹಾವೇರಿ ಹಾಗೂ ಹುಬ್ಬಳ್ಳಿಗೆ ಹೋಗುವ ಪರಿಸ್ಥಿತಿ ಇದೆ. ಹಾಗೂ ತುರ್ತು ಪರಿಸ್ಥಿತಿಯಲ್ಲಿ ಹಣ ಪಡೆಯಲು ಸಹ ತೊಂದರೆ ಆಗುತ್ತಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಯನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ, ಅವಶ್ಯಕ ಸಮಯಕ್ಕೆ ಹಣ ನೀಡುವ ಯೂನಿಯನ್ ಬ್ಯಾಂಕ್ ಎಟಿಎಂ ಇಲ್ಲಿಯ ಗ್ರಾಹಕರಿಗೆ ಸಾಕಾಗಿ ಹೋಗಿದ್ದು, ಮೇಲಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗ್ಗೆ ಗಮನ ಕೊಡಬೇಕಾಗಿದೆ.
PublicNext
20/09/2026 11:50 am
LOADING...