ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ವರದಾ ನದಿಯ ಹರಿವು ಇಳಿಕೆ- ಕ್ರೈಸ್ಟ್‌ಗೇಟ್‌ ಅಳವಡಿಕೆಗೆ ರೈತರ ಆಗ್ರಹ

ಹಾವೇರಿ ಜಿಲ್ಲೆಯ ಜೀವನಾಡಿಯಾಗಿರುವ ವರದಾ ನದಿಯ ಹರಿವು ಇಳಿಕೆಯಾಗುತ್ತಿದೆ. ನದಿಗೆ ಸುಮಾರು 14 ಕ್ರೈಸ್ಟ್‌ಗೇಟ್‌ ಕಂ ಬ್ಯಾರೇಜ್‌ಗಳಿದ್ದು, ಅವುಗಳನ್ನು ಹಾಕುವಂತೆ ರೈತರು ಒತ್ತಾಯಿಸಿದ್ದಾರೆ.

ಕ್ರೈಸ್ಟ್‌ಗೇಟ್‌ಗಳನ್ನು ಅಳವಡಿಸಿದರೆ ಆಯಾ ಪ್ರದೇಶಗಳಲ್ಲಿ ನೀರು ಸಂಗ್ರಹವಾಗಲಿದೆ. ಅಲ್ಲದೆ, ಏತ ನೀರಾವರಿ ಯೋಜನೆಗಳಿಗೂ ನೀರು ಹರಿಸಲು ಅನುಕೂಲವಾಗಲಿದೆ.

ಪ್ರತಿವರ್ಷ ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಕ್ರೈಸ್ಟ್‌ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಆದರೆ, ಪ್ರಸಕ್ತ ವರ್ಷ ಸೆಪ್ಟೆಂಬರ್‌ ಆರಂಭದಲ್ಲೇ ನದಿಯ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಕ್ರೈಸ್ಟ್‌ಗೇಟ್‌ಗಳನ್ನು ಅಳವಡಿಸುವಂತೆ ರೈತರು ಒತ್ತಾಯಿಸಿದ್ದಾರೆ.

Edited By : Somashekar
PublicNext

PublicNext

09/09/2026 12:00 am

Cinque Terre

7.33 K

Cinque Terre

0

ಸಂಬಂಧಿತ ಸುದ್ದಿ