ಹಾವೇರಿ: ಮುಸ್ಲಿಂ ಸಮುದಾಯದ ಡಿವೈಎಸ್ಪಿಯೊಬ್ಬರು ಸತ್ಯನಾರಾಯಣ ಪೂಜೆ ಮಾಡುವ ಮೂಲಕ ಭಾವೈಕ್ಯತೆ ಸಂದೇಶ ನೀಡಿದ್ದಾರೆ.
ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಡಿವೈ ಎಸ್ ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮೀವುಲ್ಲಾ ಅವರು ಕೋಮು ಸಾಮರಸ್ಯ ನೀಡಿದ ಅಧಿಕಾರಿ.
ಪೊಲೀಸ್ ಅಧಿಕಾರಿ ಸಮೀವುಲ್ಲಾ ಕುಟುಂಬ ಸಮೇತ ಕಚೇರಿಗೆ ಆಗಮಿಸಿ ಹಿಂದೂ ಸಂಪ್ರದಾಯದಂತೆ ಸತ್ಯನಾರಾಯಣ ಪೂಜೆ ಸಲ್ಲಿಸಿದ್ದಾರೆ. ಗಣೇಶ ಚತುರ್ಥಿ ಅಂಗವಾಗಿ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು.
ದಂಪತಿಯ ಈ ಕಾರ್ಯ ಉಳಿದ ಅಧಿಕಾರಿಗಳಿಗೆ ಮಾದರಿಯಾಗಿದೆ. ಹಿರಿಯ ಅಧಿಕಾರಿಗಳು ಸಮೀವುಲ್ಲಾ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
18/09/2026 04:40 pm
LOADING...