ಶಿಗ್ಗಾವಿ : ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ, ಸೇರ್ಪಡೆ, ಹಾಗೂ ತಿದ್ದುಪಡಿ ಮಾಡಿಸಲು ಶಿಗ್ಗಾವಿ ಪಟ್ಟಣದಲ್ಲಿರುವ ಆಹಾರ ನಿರೀಕ್ಷಕರ ಕಚೇರಿಗೆ ಹೋಗುತ್ತೀರಾ? ಹಾಗಾದ್ರೆ ನೀವು ಬರಿ ಕೈಯಲ್ಲಿ ಹೋಗಬೇಡಿ,ಯಾಕಂದ್ರೆ ಇಲ್ಲಿ ದುಡ್ಡು ಕೊಟ್ಟರೆ ಮಾತ್ರ ನಿಮ್ಮ ಕೆಲಸ ಪಕ್ಕಾ, ಇಲ್ಲದಿದ್ದರೆ ಇಲ್ಲ.
ಹೌದು ಸರಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಯಾರಿಗೂ ಹಣ ಕೇಳಬಾರದು ಎಂಬ ಕಟ್ಟು ನಿಟ್ಟಿನ ನಿಯಮ ಸರಕಾರ ಮಾಡಿದೆ. ಆದರೆ ಶಿಗ್ಗಾವಿ ಪಟ್ಟಣದಲ್ಲಿರುವ ಕಂದಾಯ ಇಲಾಖೆ ಆಹಾರ ನಿರೀಕ್ಷಕರ ಕಚೇರಿಯಲ್ಲಿ ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ, ಸೇರ್ಪಡೆ, ಹಾಗೂ ತಿದ್ದುಪಡಿ ಮಾಡಿಸಲು ಪ್ರತಿಯೊಬ್ಬರು 50 ರೂಪಾಯಿ ನೀಡಲೇಬೇಕು. ಇಲ್ಲದಿದ್ದರೆ ಇಲ್ಲಿಗೆ ಬರುವ ಬಡವರು ಕೂಲಿ ಕಾರ್ಮಿಕರನ್ನು ದಿನನಿತ್ಯ ಅಲೆದಾಡಿಸುತ್ತಾರೆ.
ಈ ಬಗ್ಗೆ ಪ್ರಶ್ನೆ ಮಾಡಿದರೆ ಇಲ್ಲಿಯ ಆಹಾರ ನಿರೀಕ್ಷಕ ಅಧಿಕಾರಿ ಶಾಂತಕುಮಾರ್ ಯತ್ನಳ್ಳಿ ಅವರು ಹಣ ತೆಗೆದುಕೊಳ್ಳಲು ಹೇಳಿದ್ದಾರೆ ಅಂತಿದ್ದಾರೆ ಇಲ್ಲಿನ ಸಿಬ್ಬಂದಿ. ಮಾಧ್ಯಮದವರು ಆಹಾರ ನಿರೀಕ್ಷಕ ಅಧಿಕಾರಿಯನ್ನು ವಿಚಾರಿಸಿದರೆ ಹೌದು ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳವಿಲ್ಲ, ಹೀಗಾಗಿ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದು ಇದು ಎಷ್ಟು ಸರಿ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
PublicNext
16/09/2026 01:24 pm
LOADING...