ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಶಾಸಕ ಎನ್.ವೈ. ಗೋಪಾಲಕೃಷ್ಣ ವಿರುದ್ಧ ಬಿಜೆಪಿ ಮುಖಂಡ ಅವಹೇಳನ - ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಮೊಳಕಾಲ್ಮುರು: ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡನೊಬ್ಬ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದಲ್ಲಿ 175 ತಾಲೂಕುಗಳಲ್ಲಿಯೂ ಬರಗಾಲವಿದ್ದು, ಸರ್ಕಾರವು ಮೊದಲು 101 ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಿ ಘೋಷಿಸಿದ್ದಾರೆ. ಈಗಾಗಲೇ ಶಾಸಕರು ಸಿಎಂ, ಡಿಸಿಎಂ ಬಳಿ ಚರ್ಚಿಸಿದ್ದಾರೆ. ಮುಂದಿನ ದಿನದಲ್ಲಿ ತಾಲೂಕು ಬರಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ. ಇದೇ ವಿಷಯವನ್ನು ಬಳಸಿಕೊಂಡು ಬಿಜೆಪಿಯವರೂ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಪ್ರತಿಭಟನೆಯಿಂದ ಬರಘೋಷಣೆಯಾಯಿತು ಎನ್ನುವ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕಿನ ಅಭಿವೃದ್ಧಿ ವಿಷಯಕ್ಕೆ ಬಿಜೆಪಿಯವರು ಟೀಕೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ, ಆದರೆ ಶಾಸಕರನ್ನು ವೈಯಕ್ತಿಕವಾಗಿ ನಿಂದಿಸುವುದು ಯಾರಿಗೂ ಶೋಭೆ ತರಲಾರದು. ಬರ ಘೋಷಣೆಯ ವಿಷಯದಲ್ಲಿ ಕೇಂದ್ರ ಸರ್ಕಾರದವರು ನಡೆಸಿದ ಸ್ಯಾಟಲೈಟ್ ಸರ್ವೆ ಕಾರ್ಯವೂ ಸೇರಿರುತ್ತದೆ. ಈ ಅಧಿಕಾರಿಗಳು ನೀಡಿದ ವರದಿಯ ಹಿನ್ನೆಲೆಯಲ್ಲಿ ತಾಲೂಕು ಬರಪಟ್ಟಿಯಿಂದ ಹೊರಗೆ ಉಳಿಯುವಂತಾಗಿದೆ. ಸರ್ಕಾರ ಘೋಷಿಸುವ ಮುಂದಿನ ಬರ ಪಟ್ಟಿಯಲ್ಲಿ ನಮ್ಮ ತಾಲೂಕಿನ ಹೆಸರು ಮೊದಲಿರುತ್ತದೆ ಎಂದರು.

ಬಿಜೆಪಿಯವರು ಕೇವಲ ಆರೋಪ ಮಾಡುತ್ತಿದ್ದಾರೆ. ಕೇವಲ ಅಪಪ್ರಚಾರ ಮಾಡುವುದು ಇವರ ದೈನಂದಿನ ಕೆಲಸವಾಗಿದೆ. ಇವರ ಅವಧಿಯಲ್ಲಿ ಇಲ್ಲಿ ಕೈಗೊಂಡ ಕಾಮಗಾರಿಗಳು ಅರ್ಧಬರೆಯಾಗಿವೆ. ಬಿಜೆಪಿ ಮುಖಂಡರೊಬ್ಬರು ಶಾಸಕರನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ. ಮೊದಲಿಗೆ ಅವರು ಶಾಸಕರ ಕ್ಷಮೆ ಕೇಳಬೇಕು. ಇದು ಮತ್ತೊಮ್ಮೆ ಮರುಕಳಿಸಿದರೆ ಕಾಂಗ್ರೆಸ್ ಉಗ್ರವಾದ ಹೋರಾಟಕ್ಕೂ ಸದಾ ಸಿದ್ಧರಿದ್ದೇವೆ ಎಂದರು.

ಪಟ್ಟಣದ ತಾಲೂಕು ಆಡಳಿತ ಸೌಧ ಕಚೇರಿ ಮುಂಭಾಗದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಮುಕ್ಕ ರಸ್ತೆಯಲ್ಲಿ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಬಳಸಿಕೊಂಡು ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡಿತು.

Edited By : Somashekar
PublicNext

PublicNext

03/09/2026 08:17 pm

Cinque Terre

13.39 K

Cinque Terre

0

ಸಂಬಂಧಿತ ಸುದ್ದಿ