ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಆಟೋ ಕಾಂಪ್ಲೆಕ್ಸ್‌ ಗ್ಯಾರೇಜ್‌ನಲ್ಲಿ 3 ಲಕ್ಷ ನಗದು, ಬ್ಯಾಟರಿ ದೋಚಿದ ಕಳ್ಳರು

ಶಿವಮೊಗ್ಗ : ನಗರದ ಆಟೋ ಕಾಂಪ್ಲೆಕ್ಸ್‌ನಲ್ಲಿರುವ 'ಇಂಡಿಯನ್ ಕಾರ್ ಗ್ಯಾರೇಜ್'‌ನಲ್ಲಿ ತಡರಾತ್ರಿ ಭಾರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು ಹಾಗೂ ಬ್ಯಾಟರಿ ಎಗರಿಸಿ ಖದೀಮರು ಪರಾರಿಯಾಗಿದ್ದಾರೆ.

ಕಾರು ರಿಪೇರಿಗಾಗಿ ಗ್ಯಾರೇಜ್ ಮಾಲೀಕರು ಇಟ್ಟಿದ್ದ 3.01 ಲಕ್ಷ ನಗದು ಹಣ ಹಾಗೂ ಗ್ಯಾರೇಜ್‌ನಲ್ಲಿದ್ದ ಬ್ಯಾಟರಿಯನ್ನು ಕಳ್ಳರು ದೋಚಿದ್ದಾರೆ. ತಡರಾತ್ರಿ ವೇಳೆಗೆ ಬಂದ ಇಬ್ಬರು ಮುಸುಕುಧಾರಿ ಕಳ್ಳರು ಗ್ಯಾರೇಜ್‌ನ ಬಾಗಿಲು ಮುರಿದು ಒಳನುಗ್ಗಿ ಈ ಕೃತ್ಯ ಎಸಗಿದ್ದಾರೆ.

ಕಳ್ಳತನದ ಸಂಪೂರ್ಣ ದೃಶ್ಯಾವಳಿ ಪಕ್ಕದ ಗ್ಯಾರೇಜ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಮುಸುಕುಧಾರಿಗಳನ್ನು ಗ್ಯಾರೇಜ್ ಬಳಿ ಬಿಟ್ಟು ಮತ್ತೊಬ್ಬ ಆರೋಪಿ ಬೈಕ್‌ನಲ್ಲಿ ತೆರಳಿದ್ದ. ಕಳ್ಳತನ ನಡೆಯುವ ಸಮಯದಲ್ಲಿ ಹೊರಗಡೆ ನಿಂತು ಸಿಗ್ನಲ್ ನೀಡುತ್ತಿದ್ದ ಬೈಕ್ ಸವಾರನ ದೃಶ್ಯವೂ ಸಿಸಿ ಟಿವಿಯಲ್ಲಿ ದಾಖಲಾಗಿದೆ.

​ಪೊಲೀಸ್ ತನಿಖೆ ಚುರುಕು

ಗ್ಯಾರೇಜ್‌ನ ಒಳಗಿನ ಸಂಪೂರ್ಣ ಮಾಹಿತಿ ತಿಳಿದಿರುವವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ವಿನೋಭಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಕಳ್ಳರಿಗಾಗಿ ಜಾಲ ಬೀಸಿದ್ದಾರೆ.

Edited By :
PublicNext

PublicNext

16/09/2026 06:23 pm

Cinque Terre

6.93 K

Cinque Terre

0

ಸಂಬಂಧಿತ ಸುದ್ದಿ