ಹೊಸಪೇಟೆ : ಐದನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ, ಹೊಡೆದಾಟ ನಡೆದಿದೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮೇನ್ ಮಸೀದಿ ಮುಂಭಾದ ನಡೆದಿದೆ.
5ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಈ ಘಟನೆ ನಡೆದಿದ್ದು, ಕಿಕ್ಕಿರಿದು ಸೇರಿದ ಜನರ ಮಧ್ಯ ಯುವಕರು ಹೊಡೆದಾಡಿಕೊಂಡಿದ್ದಾರೆ. ಹೊಸಪೇಟೆ ನಗರದ ಕೌಲ್ ಪೇಟೆಯ ದೊಡ್ಡ ಮಸೀದಿ ಬಳಿ ಯುವಕರ ಗುಂಪೊಂದು ಯುಕನನ್ನ ಮನಸೋ ಇಚ್ಚೆ ಥಳಿಸಿದ್ದಾರೆ. ಯಾವ ಕಾರಣಕ್ಕೆ ಹೊಡೆದಿದ್ದಾರೆ, ಗಲಾಟೆ ಯಾವ ಕಾರಣಕ್ಕೆ ಆಯ್ತು ಅನ್ನೋದು ಗೊತ್ತಿಲ್ಲ. ಆದ್ರೆ ಒಬ್ಬ ಯುವಕನನ್ನ ಹತ್ತಾರು ಜನರ ಗುಂಪೊದು ಅಟ್ಟಾಡಿಸಿ ಥಳಿಸಿದ್ದಾರೆ. ಘಟಾನ ವೇಳೆ ಪೊಲೀಸರ ಬರ್ತಿದ್ದಂತೆ ಯುವಕರ ಗುಂಪು ಅಲ್ಲಿಂದ ಕಾಲ್ಕಿತ್ತಿದೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
18/09/2026 10:23 pm
LOADING...