ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾತಿ ಭೇದ-ಭಾವ ಇಲ್ಲದೆ 11 ವರ್ಷದಿಂದ ಗಣೇಶ ಮೂರ್ತಿ ಖರೀದಿಗೆ ಹಣ ದೇಣಿಗೆ ನೀಡ್ತಿದ್ದಾರೆ ಮುಸ್ಲಿಂ ಸಮಾಜದ ಬಾಂಧವರು

ಹಗರಿಬೊಮ್ಮನಹಳ್ಳಿ : ಹಿಂದೂ - ಮುಸ್ಲಿಂ ಅಂತ ಹೊಡೆದಾಡಿಕೊಳ್ಳುವವರು ಇಲ್ಲೊಮ್ಮೆ ತಿರುಗಿ ನೋಡುವ ರೀತಿ ಸಂದೇಶ ಸಾರಲಾಗಿದೆ. ಜಾತಿ, ಧರ್ಮ ಭೇದ-ಭಾವ ಮರೆತು ಧರ್ಮಸ್ಥಳವನ್ನೇ ಹಿಂದೂ-ಮುಸ್ಲಿಮರು ಒಗ್ಗೂಡಿ ಧರೆಗಿಳಿಸಿದ್ದಾರೆ. ಅನ್ನದಾಸೋಹಕ್ಕೆ ಹೆಸರಾದ ಧರ್ಮಸ್ಥಳದ ದೇವಸ್ಥಾನದ ದ್ವಾರಬಾಗಿಲು ನಿರ್ಮಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಘ್ನವಿನಾಶಕನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಈ ಬಾರಿಯ ವಿಶೇಷ ಗಣೇಶನನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

ರಾಜ್ಯದಲ್ಲಿ ಅಲ್ಲಲ್ಲಿ ಹಿಂದೂ - ಮುಸ್ಲಿಂ ಅಂತ ಕೋಮು ಘಟನೆಗಳು ನಡೆಯುತ್ತಿರುವುದರ ಮಧ್ಯೆ ಹಗರಿಬೊಮ್ಮನಹಳ್ಳಿಯ ಪವಾಡಿ ಹನುಮಂತಪ್ಪ ನೇತೃತ್ವದ ಏಕದಂತ ಗ್ರೂಪ್‌ನ ಯುವಕರು ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಸಾಕ್ಷಾತ್ ಧರ್ಮಸ್ಥಳ ದೇಗುಲವನ್ನೇ ನಿರ್ಮಾಣ ಮಾಡಲಾಗಿದ್ದು, ಧರ್ಮಸ್ಥಳದಲ್ಲಿ ದ್ವಾರಬಾಗಿಲು ಮೂಲಕ ತೆರಳಿ ಮಂಜುನಾಥನ ದರ್ಶನ ಭಕ್ತರು ಹೇಗೆ ಪಡೆಯುತ್ತಾರೋ ಅದೇ ರೀತಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಗಣೇಶನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಧರ್ಮಸ್ಥಳ ಮಾದರಿ ಗಣಪತಿ ನೋಡಲು ಜನಸಾಗರವೇ ಹರಿದುಬರುತ್ತಿದೆ.

ಕಳೆದ 11 ವರ್ಷಗಳಿಂದಲೂ ಹಿಂದೂ ಮುಸ್ಲಿಮರು ಸೇರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, 11 ವರ್ಷಗಳಿಂದಲೂ ಹಿಂದೂಗಳು ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಯನ್ನು ಮುಸ್ಲಿಮರೇ ಹಣ ಕೊಟ್ಟು ಗಣೇಶ ಮೂರ್ತಿ ಖರೀದಿ ಮಾಡಿ ಹಿಂದೂ ಬಾಂಧವರಿಗೆ ದೇಣಿಗೆ ನೀಡುತ್ತಿದ್ದಾರೆ. ಈ ಬಾರಿ ಮುಸ್ಲಿಂ ಸಮಾಜದ ನಿವೃತ್ತ ಸೈನಿಕ ಮುಜಾವರ್ ಹಸನ್‌ಸಾಬ್ 50 ಸಾವಿರ ಹಣವನ್ನು ಗಣೇಶ ಮೂರ್ತಿ ಖರೀದಿಗೆ ದೇಣಿಗೆ ಕೊಟ್ಟಿದ್ದಾರೆ. ಕಳೆದ 11 ವರ್ಷಗಳಿಂದ ಒಬ್ಬೊಬ್ಬರು ಗಣೇಶ ಮೂರ್ತಿ ಖರೀದಿಗೆ ಹಣ ನೀಡುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ. ಆದರೆ ಜಾತಿ ಭೇದ-ಭಾವ ಮರೆತು ಮುಸ್ಲಿಂ ಸಮಾಜದ ಜನ ಕೂಡ ವಿಘ್ನವಿನಾಶಕನ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ವಿಘ್ನೇಶನ ದರ್ಶನದ ಬಳಿಕ ಪರಶುರಾಮನ ಬೃಹತ್ ಭಾವಚಿತ್ರ, ಶ್ರವಣಬೆಳಗೊಳ ಚಿತ್ರ, ಈಶ್ವರಲಿಂಗ ಸೇರಿ ಮಹನೀಯ ವ್ಯಕ್ತಿಗಳ ಭಾವಚಿತ್ರಗಳನ್ನು ವಸ್ತುಪ್ರದರ್ಶನದ ರೀತಿ ಇರಿಸಲಾಗಿದ್ದು, ಭಕ್ತರಿಗೆ ಮತ್ತೊಂದು ಸಂತಸದ ವಾತಾವರಣ ನೀಡುತ್ತಿದೆ.

Edited By :
PublicNext

PublicNext

16/09/2026 05:53 pm

Cinque Terre

6.31 K

Cinque Terre

0

ಸಂಬಂಧಿತ ಸುದ್ದಿ