ಹಡಗಲಿ : ವಿಜಯನಗರ ಜಿಲ್ಲೆಯ ಹಡಗಲಿಯಲ್ಲಿ ಗಣೇಶ ವಿಸರ್ಜನೆ ವೇಳೆ ಹಿಂದೂ ಮುಸ್ಲಿಂ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆರವಣಿಗೆ ವೇಳೆ ರೂಟ್ ಚೇಂಜ್ ಆಗಿದ್ದಕ್ಕೆ ಹಿಂದೂ ಧರ್ಮದ ಪದ್ಧತಿ ಆಚರಣೆ ಭಿನ್ನ ಆಗಿದೆ ಅಂತ ಹಿಂದೂ ಧರ್ಮದ ಜನರು ಹೇಳುತ್ತಿದ್ದಾರೆ. ಹಿಂದೂ ಕೋಮಿನ ಜನ ನಮಗೆ ಮನವಿ ಮಾಡಿದ್ದಾರೆ. ಈಗ ಅವರವರದ್ದೇ ಆದ ಒಂದು ಆಚಾರ - ವಿಚಾರ ಬೇರೆ ಇರುತ್ತದೆ. ಅದನ್ನ ನಾವು ಅಲ್ಲಗಳೆಯೋದಕ್ಕೆ ಆಗೋದಿಲ್ಲ ಅಂತ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹೇಳಿದ್ರು.
ಹಡಗಲಿ ತಾಲೂಕಿನಲ್ಲಿ ಸಂಧಾನ ಸಭೆ ಬಳಿಕ ಮಾತನಾಡಿದ ಅವರು, ಬೇರೆ ರೂಟ್‌ಗೆ ಕರೆದುಕೊಂಡು ಹೋಗಿದ್ದಕ್ಕೆ ಭಿನ್ನ ಆಗಿದೆ ಅಂತ ಹಿಂದೂಗಳಿಗೆ ಅನಿಸಿದೆ. ಹಾಗಾಗಿ ರೂಟ್ ಡೈವರ್ಟ್ ಆದ ಜಾಗದಲ್ಲೇ ಗಣೇಶ ಮೂರ್ತಿ ಮರಳಿ ಪ್ರತಿಷ್ಠಾಪನೆ ಮಾಡ್ತೀವಿ ಅಂದಿದ್ದಾರೆ. ಹಿಂದೂಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಅವಕಾಶ ಮಾಡಿಕೊಟ್ಟಿದ್ದೇವೆ. ಪ್ರತಿ ವರ್ಷ ಅದೇ ರೂಟ್‌ನಲ್ಲೇ ವಿಸರ್ಜನಾ ಮೆರವಣಿಗೆ ನಡೆಯುತ್ತಾ ನಡೆಯಲ್ವಾ..? ಅನ್ನೋ ಪ್ರಶ್ನೆಗೂ ಉತ್ತರಿಸಿದ ಅವರು, ಜಿಲ್ಲಾಡಳಿತ ಚರ್ಚಿಸಿ ಅದರ ಬಗ್ಗೆ ನಿರ್ಧಾರ ಮಾಡುತ್ತದೆ ಅಂತ ಡಿಸಿ ಕವಿತಾ ಮನ್ನಿಕೇರಿ ಹೇಳಿದ್ರು.
PublicNext
20/09/2026 02:59 pm
LOADING...