ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾರ ಕುಮ್ಮಕ್ಕಿನಿಂದ ರಸ್ತೆ ತಡೆದರು, ರಾಜಕೀಯ ಪ್ರೇರಿತವಾ? ನನಗೆ ತಪ್ಪುಚುಕ್ಕೆ ತರಲು ಮಾಡಿದ್ರಾ? ತನಿಖೆ ಬಳಿಕ ಗೊತ್ತಾಗುತ್ತೆ: ಶಾಸಕ ಕೃಷ್ಣ ನಾಯಕ್

ಹಡಗಲಿ : ಗಣೇಶ ಮೂರ್ತಿ ವಿಸರ್ಜನೆ ವಿಚಾರಕ್ಕೆ ಸಂಬಂಧಿಸಿದ ಗೊಂದಲದ ಪ್ರಕರಣದಲ್ಲಿ ಮುಸ್ಲಿಮರು ಯಾರ ಕುಮ್ಮಕ್ಕಿನಿಂದ ಬಂದರು ಎಂಬುದು ಗೊತ್ತಿಲ್ಲ. ಬಹಳ ದಿನಗಳಿಂದ ಹಿಂದೂ-ಮುಸ್ಲಿಮರು ಹಡಗಲಿಯಲ್ಲಿ ಅನ್ಯೋನ್ಯವಾಗಿಯೇ ಇದ್ದರು. ಹೂವಿನ ಹಡಗಲಿ ಕ್ಷೇತ್ರವು ಬಹಳ ಶಾಂತಿಯುತ ಕ್ಷೇತ್ರವಾಗಿದ್ದು, ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂಬುದು ಪೊಲೀಸ್ ಇಲಾಖೆಯ ದಾಖಲೆಯಲ್ಲಿದೆ. ಆದರೆ ರಸ್ತೆ ತಡೆದಿರುವುದನ್ನು ನೋಡಿ ನನಗೆ ಶಾಕ್ ಆಯಿತು ಎಂದು ಬಿಜೆಪಿ ಶಾಸಕ ಕೃಷ್ಣ ನಾಯಕ್ ಹೇಳಿದರು.

ಹಡಗಲಿಯಲ್ಲಿ ಮಾತನಾಡಿದ ಅವರು, ಯಾರ ಕುಮ್ಮಕ್ಕಿನಿಂದ ಅಥವಾ ಯಾರ ಬೆಂಬಲದಿಂದ ಬಂದು ರಸ್ತೆಯಲ್ಲಿ ಕುಳಿತರು ಎಂಬುದು ಗೊತ್ತಿಲ್ಲ. ನಿಜವಾಗಿಯೂ ಒಬ್ಬ ಶಾಸಕನಾಗಿ ನನಗೆ ಆಶ್ಚರ್ಯವಾಯಿತು. ರಸ್ತೆ ತಡೆದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಯಾರೊಬ್ಬರೂ ಬಂದು ನನ್ನೊಂದಿಗೆ ಮಾತನಾಡಲು ಸಿದ್ಧರಿರಲಿಲ್ಲ. ನಾನು ಗಣೇಶ ವಿಸರ್ಜನೆ ಸಮಿತಿ ಸದಸ್ಯರ ಜೊತೆಗೆ ಇದ್ದು ಸಮಸ್ಯೆಯನ್ನು ಹತೋಟಿಗೆ ತಂದಿದ್ದೇನೆ ಎಂದರು.

ರಸ್ತೆ ತಡೆ ವೇಳೆ ಗಟ್ಟಿಯಾಗಿ ನಿಂತಿದ್ದ ದೃಶ್ಯವನ್ನು ನೆನಪಿಸಿಕೊಂಡರೂ ಈಗಲೂ ನೋವಾಗುತ್ತದೆ. ಈ ಘಟನೆ ಬಹಳ ನೋವಿನ ಸಂಗತಿಯಾಗಿದ್ದು, ನಾವು ಬಹಳ ಬೇಸರದಲ್ಲಿದ್ದೇವೆ. ನಾಳೆ ಅವರ ಕಾರ್ಯಕ್ರಮಗಳು ನಡೆಯುತ್ತವೆ, ನಮ್ಮ ಸಮಾಜದ ಕಾರ್ಯಕ್ರಮಗಳೂ ನಡೆಯುತ್ತವೆ. ಇದು ಇದೇ ರೀತಿ ಮುಂದುವರಿದರೆ ಹಡಗಲಿ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಈ ಸಮಸ್ಯೆ ಇತ್ಯರ್ಥವಾಗಬೇಕು ಎಂದು ಹೇಳಿದರು.

ಅದೇ ಜಾಗದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಬೇಕು. ಅಲ್ಲಿಂದಲೇ ಗಣೇಶ ಮೂರ್ತಿಯ ಮೆರವಣಿಗೆ ನಡೆದು ವಿಸರ್ಜನೆ ಮಾಡಿದಾಗ ಮಾತ್ರ ಸಮಸ್ಯೆ ಇತ್ಯರ್ಥವಾಗುತ್ತದೆ. ಹಾಗಾಗಿ ರೂಟ್ ಬದಲಾದ ಸ್ಥಳದಲ್ಲೇ ಗಣೇಶ ಮೂರ್ತಿ ವಿಸರ್ಜನೆ ಮಾಡುತ್ತೇವೆ. ಹಿಂದೂ ಮಹಾಗಣಪತಿ ವಿಸರ್ಜನೆಯ ವೇಳೆಯೇ ಆ ಗಣಪತಿಯನ್ನೂ ಅನ್ಯಕೋಮಿನ ಜನರು ರಸ್ತೆ ತಡೆದಿದ್ದ ಸ್ಥಳದ ಮೂಲಕವೇ ಕೊಂಡೊಯ್ದು ವಿಸರ್ಜನೆ ಮಾಡುತ್ತೇವೆ ಎಂದು ಹೇಳಿದರು.

ಅಲ್ಲದೆ, ಪಕ್ಷದ ಹಿರಿಯರು ಹಾಗೂ ಸಂಘ ಪರಿವಾರದವರು ಈ ಕುರಿತು ಮಾಹಿತಿ ಪಡೆದಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿದ್ದೇವೆ. ಅವರ ಸಮ್ಮುಖದಲ್ಲೇ ಮುಂದಿನ ಕ್ರಮ ನಡೆಯಲಿದೆ. ನಮಗಾದ ಸಮಸ್ಯೆಯನ್ನು ಅವರಿಗೆ ತಿಳಿಸುತ್ತೇವೆ. ಅದೇ ಜಾಗದಿಂದ ಮೆರವಣಿಗೆ ಹೋಗಲಿದೆ ಎಂದು ಹೇಳಿದ್ದೇವೆ. ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಂತಿ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ನಮ್ಮ ನಾಯಕರಿಗೆ ಮುಟ್ಟಿಸುತ್ತೇವೆ ಎಂದು ಶಾಸಕ ಕೃಷ್ಣ ನಾಯಕ್ ಹೇಳಿದರು.

Edited By :
PublicNext

PublicNext

20/09/2026 02:41 pm

Cinque Terre

1.25 K

Cinque Terre

0

ಸಂಬಂಧಿತ ಸುದ್ದಿ