ಹಡಗಲಿ : ವಿಜಯನಗರ ಜಿಲ್ಲೆಯ ಹಡಗಲಿ ಗಣೇಶ ಮೂರ್ತಿ ಮೆರವಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕೋಮಿನ ಜನರ ಸಂಧಾನ ಸಭೆ ಬಳಿಕ ವಿಜಯನಗರ ಎಸ್.ಪಿ ಜಾಹ್ನವಿ ಸ್ಪಷ್ಟನೆ ಕೊಟ್ಟಿದ್ದಾರೆ. ಮೆರವಣಿಗೆ ನಡೆಯುವ ರೂಟ್ ಬಗ್ಗೆ ಬೇರೆ, ಬೇರೆ ಕಡೆಗೆ ಹೋಗುತ್ತಿತ್ತು ಅನ್ನೋ ಗೊಂದಲ ಇತ್ತು. ಅದಕ್ಕೆ ಈಗಾಗಲೇ ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ ಕೊಟ್ಟಿದ್ದೇವೆ ಅಂತ ಹೇಳಿದ್ರು.
ಹಡಗಲಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಂಡಿದ್ದೇವೆ. ಎರಡೂ ಕೋಮಿನ ಜನ ಒಪ್ಪಿಕೊಂಡಿದ್ದಾರೆ. ಗಣೇಶ ಮೂರ್ತಿ ಯಾವ ರೂಟ್‌ನಲ್ಲಿ ಬರುತ್ತೆ ಅಂತ ಅನ್ಯ ಕೋಮಿನ ಜನಕ್ಕೆ ಸ್ಪಷ್ಟತೆ ಇರಲಿಲ್ಲ, ಗೊಂದಲ ಇತ್ತು. ಎರಡೂ ಕಡೆಯ ಜನರ ಅಭಿಪ್ರಾಯ ಪಡೆದು ಸ್ಪಷ್ಟನೆ ಕೊಟ್ಟಿದ್ದೇವೆ. ಗಣೇಶ ವಿಸರ್ಜನೆಗೆ ಅನುಮತಿ ಕೊಟ್ಟಿತ್ತೋ ಅದು ಎರಡೂ ಬದಿಯ ರಸ್ತೆ ಆಗಿದೆ. ಈ ಬಾರಿಯ ಗಣೇಶ ವಿಸರ್ಜನೆ ಅದೇ ರೂಟ್‌ನಲ್ಲಿ ಹೋಗ್ತಾರೆ ಅನ್ನೋ ನಿರೀಕ್ಷೆ ಇತ್ತು. ಕಳೆದ ಬಾರಿ ರಸ್ತೆ ಕಾಮಗಾರಿ ನಡೆಯುತ್ತಿತ್ತು ಅಂತ ರೂಟ್ ಡೈವರ್ಟ್ ಮಾಡಲಾಗಿತ್ತು. ನಮ್ಮ ಏರಿಯಾದಲ್ಲಿ ಗಣೇಶ ಮೆರವಣಿಗೆ ಬರಬಾರದು ಅಂತ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಆದರೆ ಮೆರವಣಿಗೆ ಇದೇ ರೂಟ್‌ನಲ್ಲಿ ಬರುತ್ತಿದೆ ಅಂತ ಅನ್ಯ ಕೋಮಿನ ಜನಕ್ಕೆ ಗೊಂದಲ ಇತ್ತು. ಅದರ ಬಗ್ಗೆ ಎರಡೂ ಕಡೆಯವರಿಗೆ ಸ್ಪಷ್ಟನೆ ಕೊಟ್ಟಿದ್ದೇವೆ ಅಂತ ವಿಜಯನಗರ ಎಸ್.ಪಿ ಜಾಹ್ನವಿ ಹೇಳಿದ್ರು.
PublicNext
20/09/2026 02:56 pm
LOADING...