ವಾಯ್ಸ್ : ಹೌದು... ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಅಂದು ಬಂಕಿಮ್ ಚಂದ್ ಚಟರ್ಜಿ ‘ವಂದೇ ಮಾತರಂ’ ಗೀತೆಯನ್ನ ಬರೆದ ಉದ್ದೇಶವೇ ಬೇರೆ ಆಗಿತ್ತು. ರಾಷ್ಟ್ರವನ್ನ ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಭಾರತದ ಜನರನ್ನ ಒಗ್ಗೂಡಿಸಲು ಬರೆದ ಗೀತೆ... ಆದ್ರೀವತ್ತು ಅದೇ ವಂದೇ ಮಾತರಂ ಗೀತೆ ಕಾಂಗ್ರೆಸ್ ಬಿಜೆಪಿ ನಾಯಕರ ಕೆಸರು ಎರೆಚಾಟಕ್ಕೆ ಸಾಕ್ಷಿ ಆಗಿದೆ. ಮೊನ್ನೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ತಾಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ ವೇಳೆ ಸರ್ಕಾರದ ಆದೇಶದಂತೆ ಅಧಿಕಾರಿಗಳು ಎರಡೇ ಪ್ಯಾರಾ ಹಾಡೋದಕ್ಕೆ ಮುಂದಾಗಿದ್ರು. ಆದ್ರೆ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಎರಡು ಚರಣದ ಬದಲು ಸಂಪೂರ್ಣ ವಂದೇ ಮಾತರಂ ಗೀತೆ ಹಾಡೊಸೋ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ರು. ಆದ್ರೆ ವಂದೇ ಮಾತರಂ ಗೀತೆಯ ಎಲ್ಲಾ ಚರಣವನ್ನ ಅಧಿಕಾರಿಗಳು, ಸರ್ಕಾರಿ ಕಾರ್ಯಕ್ರಮದಲ್ಲಿ ಹಾಡಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇನೆ ಅಂತ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಜನಾರ್ದನ ರೆಡ್ಡಿ ಒತ್ತಡಕ್ಕೆ ಮಣಿದು ವಂದೇ ಮಾತರಂ ಗೀತೆ ಹಾಡಿದವರಿಗೂ ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ. ಇದ್ರಿಂದ ಅಧಿಕಾರಿಗಳು ಗಂಗಾವತಿ ಪ್ರಜಾಸೇವಾ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆ ಹಾಡಿದವರಿಗೆ ಸಂಕಷ್ಟ ಎದುರಾಗಿದೆ.
...
ವಾಯ್ಸ್ : ವಂದೇ ಮಾತರಂ ಗೀತೆ ವಿಚಾರವಾಗಿ ಕಾಂಗ್ರೆಸ್ vs ಬಿಜೆಪಿ ಜಿದ್ದಾ - ಜಿದ್ದಿನ ರಾಜಕೀಯ ಶುರು ಆಗಿದೆ. ಹಾಗಿದ್ರೆ ವಂದೇ ಮಾತರಂ ಸಂಪೂರ್ಣ ಹಾಡುವುದೇ ಅಪರಾಧವಾಯ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಇದ್ರಿಂದ ಸರ್ಕಾರಿ ನೌಕರರ ಮೇಲೆ ಬ್ರಹ್ಮಾಸ್ತ್ರ ಹೂಡಲು ಸರ್ಕಾರ ನಿಂತಂತಾಗಿದೆ. ಎರಡೂ ಪಕ್ಷಗಳ ಗೊಂದಲದಿಂದ ಯಾರ ಮಾತು ಪಾಲಿಸಬೇಕು ಎನ್ನುವ ಗೊಂದಲದಲ್ಲಿ ಸರ್ಕಾರಿ ನೌಕರರು ಸಿಲುಕಿಕೊಂಡಿದ್ದಾರೆ. ಇದ್ರ ಮಧ್ಯೆ ಸರ್ಕಾರ ವಂದೇ ಮಾತರಂ ಗೀತೆ ಹಾಡಬಾರದು ಅಂತ ಏನೋ ಆದೇಶ ಹೊರಡಿಸಿದೆ. ಆದ್ರೆ ವೇದಿಕೆಯಲ್ಲಿ ಬಿಜೆಪಿ ಶಾಸಕ, ಸಂಸದರಿದ್ರೆ ಅವರ ಮಾತಿಗೆ ಬೆಲೆಯಿಲ್ವಾ ಅನ್ನೋ ಯಕ್ಷ ಪ್ರಶ್ನೆ ಹುಟ್ಟುಹಾಕಿದೆ. ಸರ್ಕಾರಿ ನೌಕರರು ಶಾಸಕ, ಸಂಸದರ ಮಾತು ಮೀರಿ ಅಧಿಕಾರಿಗಳು ನಿಲ್ಲಬೇಕಾ.. ಬಿಡಬೇಕೋ ಅನ್ನೋ ಪೇಚಿಗೆ ಸರ್ಕಾರಿ ಅಧಿಕಾರಿಗಳು ಸಿಲುಕಿದ್ದಾರೆ. ಒಂದೆಡೆ ಸರ್ಕಾರದಿಂದ ಅಧಿಕಾರಿಗಳ ಮೇಲೆ ಒತ್ತಡ, ಮತ್ತೊಂದೆಡೆ ಬಿಜೆಪಿ, ಜೆಡಿಎಸ್ ಶಾಸಕರು ಸಂಸದರು ವೇದಿಕೆ ಮೇಲಿದ್ದಾಗ ವಂದೇ ಮಾತರಂ ಮಾತಾಡುವ ಸಂಕಷ್ಟ.. ಇವೆರಡರ ಮಧ್ಯೆ ಅಧಿಕಾರಿಗಳು ಸಿಲುಕಿ ವಿಲ ವಿಲ ಒದ್ದಾಡುವ ದುಸ್ಥಿತಿ ನಿರ್ಮಾಣ ಆಗಿದೆ. ರಾಜಕೀಯ ಮೇಲಾಟಗಳು, ಸಚಿವರ ಸೂಚನೆ ಕಾಂಗ್ರೆಸ್ - ಬಿಜೆಪಿ ಮಧ್ಯೆ ಮತ್ತಷ್ಟು ಸಂಘರ್ಷಗಳಿಗೆ ವೇದಿಕೆ ಆಗೋದು ಸಾಧ್ಯತೆ ದಟ್ಟವಾಗಿದ್ದು, ವಂದೇ ಮಾತರಂ ಗೀತೆ ಪೂರ್ಣ ಹಾಡಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟಿದ್ರಿಂದ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿಸಿದಂತಾಗಿದೆ.
ಒಟ್ಟಿನಲ್ಲಿ... ಬಂಕಿಮ ಚಂದ್ರ ಚಟರ್ಜಿ ಬರೆದ ಆನಂದಮಠ ಕಾದಂಬರಿಯಲ್ಲಿನ ಗೀತೆ ಅಂದು ಬ್ರಿಟಿಷರ ವಿರುದ್ಧ ದೇಶದ ಜನರನ್ನ ಒಗ್ಗೂಡಿಸಲು ಬರೆದಿದ್ರು. ಅಂದು ಅವರು ಯಾವ ಉದ್ದೇಶಕ್ಕೆ ಬರೆದಿದ್ರೋ ಆ ಉದ್ದೇಶ ಇಡೇರಿತ್ತು. ಆದ್ರಿವತ್ತು ಅದೇ ವಂದೇ ಮಾತರಂ ಗೀತೆಯಲ್ಲಿನ ಎರಡೇ ಚರಣ ಹಾಡುತ್ತೇವೆ ಅಂತ ವಿವಾದ ಸೃಷ್ಟಿ ಮಾಡಿದ್ದಾರೆ. ಕಾಂಗ್ರೆಸ್ - ಬಿಜೆಪಿ, ಜೆಡಿಎಸ್ ಮಧ್ಯೆ ಸೃಷ್ಟಿ ಆಗಿರೋ ರಾಜಕೀಯ ಜಿದ್ದು ಸರ್ಕಾರಿ ಅಧಿಕಾರಿಗಳಿಗೆ ಸಂಕಷ್ಟ ತಂದಿಟ್ಟಿರೋದಂತೂ ಸತ್ಯ. ಸರ್ಕಾರಿ ಅಧಿಕಾರಿಗಳು ಯಾರು, ಯಾವ ಶಾಸಕರ ಪರ ಕೆಲಸ ಮಾಡಬೇಕು ಅನ್ನೋ ಗೊಂದಲದಲ್ಲಿ ಇರೋದಂತೂ ಸ್ಪಷ್ಟ.
__
ಪಾಂಡುರಂಗ ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ
PublicNext
19/09/2026 09:55 am