ಹೊಸಪೇಟೆ : ಐದನೇ ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಾಡಿನಾದ್ಯಂತ ಡಿಜೆ ಸೌಂಡ್‌ಗಳ ಅಬ್ಬರದ ಜೋರಾಗಿದೆ. ಇದ್ರ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕುರುಬರ ಓಣಿ ಗಣಪ ವಿಸರ್ಜನೆ ಮೆರವಣಿಗೆ ಯಾವುದೇ ಡಿಜೆ ಸದ್ದಿಲ್ಲದೇ ಕೇವಲ ದೇಶಿ ಕಲೆ, ಮೃತ್ಯು ಪ್ರದರ್ಶನದ ಮೂಲಕ ಅದ್ದೂರಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ ಮಾಡಲಾಯಿತು.
ಆಧುನಿಕ ಸಂಸ್ಕೃತಿಗೆ ಸೆಡ್ಡು ಹೊಡೆದು ಜಾನಪದ ಕಲೆಯ ಮೂಲಕ ಗಣೇಶ ಉತ್ಸವ ಆಚರಣೆ ಮಾಡಲಾಯಿತು. ಸಾಂಪ್ರದಾಯಿಕ ಉಡುಗೆ.. ಕೈಯಲ್ಲಿ ಡೊಳ್ಳು, ತಾಳ ಬಾರಿಸಿ ಯುವಕರು, ಮಹಿಳೆಯರು ಎನ್ನದೇ ಚಿಕ್ಕ ಚಿಕ್ಕ ಮಕ್ಕಳು ಹೆಜ್ಜೆ ಹಾಕಿದ್ದು ನೋಡುಗರ ಗಮನ ಸೆಳೆದವು. ಹೊಸಪೇಟೆ ತಾಲೂಕಿನ ಕುರುಬರ ಓಣಿ ಏರಿಯಾದ ಗಣೇಶ ವಿಸರ್ಜನೆ ವೇಳೆ ಗ್ರಾಮೀಣ ಸೊಗಡಿನ ಜಾನಪದ ಕಲಾಮೇಳದೊಂದಿಗೆ ಅದ್ಧೂರಿ ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಿತು. ಕುರುಬರ ಓಣಿ ನಿಜಲಿಂಗಪ್ಪ ಯುವಕರ ಸಂಘದಿಂದ ಕಳೆದ 27 ವರ್ಷದಿಂದ ಇದೇ ರೀತಿ ದೇಶೀಯ ಕಲೆ, ನೃತ್ಯ ಪ್ರದರ್ಶನದ ಮೂಲಕವೇ ಗಣೇಶ ಹಬ್ಬವನ್ನ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ಮಕ್ಕಳು, ದೊಡ್ಡವರು ಎನ್ನದೇ ಡೊಳ್ಳು ಯುವ ಸಮೂಹ ಕುಣಿತದಲ್ಲಿ ಭಾಗಿಯಾಗಿದ್ರು. ಡಿಜೆ ನಿಷೇಧದ ನಡುವೆಯೂ ಡಿಜೆ ಸಂಸ್ಕೃತಿಗೆ ಪರ್ಯಾಯವಾಗಿ ಜಾನಪದ ಕಲೆಗೆ ಒತ್ತು ಕೊಟ್ಟಿರೋದು ಕಂಡು ಬಂತು. ಕುರುಬರ ಓಣಿಯ ಗಣಪತಿ ವಿಸರ್ಜನಾ ಮೆರವಣಿಗೆಗೆ ಜನರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಲಕ್ಷ, ಲಕ್ಷ ಹಣ ಕೊಟ್ಟು ಡಿಜೆ ಬಾಡಿಗೆ ಪಡೆದು ಯರ್ರಾ... ಬಿರ್ರೀ... ಕುಣಿಯೋರ ಮಧ್ಯೆ ದೇಶೀಯ ಕಲೆ ಗಮನ ಸೆಳೆದಿದ್ದಂತು ಸುಳ್ಳಲ್ಲ.
PublicNext
19/09/2026 02:32 pm
LOADING...