ಹೊಸಪೇಟೆ: ಗೌರಿ- ಗಣೇಶ ಹಬ್ಬದ ನಿಮಿತ್ತ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ಗಣೇಶ ಮಂಡಳಿ ಪ್ರಮುಖರನ್ನು ಕರೆಸಿ ಎಸ್ಪಿ ಜಾಹ್ನವಿ ಶಾಂತಿ ಸಭೆ ನಡೆಸಿದ್ರು. ವಿಜಯನಗರ ಜಿಲ್ಲೆಯ ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಶಾಂತಿ ಸಭೆಯಲ್ಲಿ ವಿವಿಧ
ಗಣೇಶ ಮಂಡಳಿಗಳು, ಸಂಘ ಸಂಸ್ಥೆಗಳ ಮುಖಂಡರು ಭಾಗಿಯಾದರು.
ಇದೇ ವೇಳೆ ಗಣೇಶ ಮೂರ್ತಿ ಕೂಡಿಸುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಎಸ್ಪಿ ಜಾಹ್ನವಿ, ಗಣೇಶ ಮಂಡಳಿಯ ಸದಸ್ಯರು ನಿಯಮಗಳನ್ನು ಪಾಲನೆ ಮಾಡಬೇಕು. ಏಕಗವಾಕ್ಷಿ ಯೋಜನೆಯಡಿಯಲ್ಲಿ ಪರವಾನಿಗೆ ನೀಡಲಾಗುತ್ತಿದೆ. ನಿಯಮ ಪಾಲನೆ ಮಾಡಬೇಕಿದೆ. ಯಾವುದೇ ಅಹಿತಕರ ಘಟನೆ ನಡೆದ್ರೂ 112 ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಕರೆ ಮಾಡಿ ತಿಳಿಸಬೇಕು ಎಂದರು.
ಶಾಂತಿ ಸಭೆಯಲ್ಲಿ ವಿಜಯನಗರ ಎಸ್ಪಿ ಜಾಹ್ನವಿ ಎಸ್., ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಎಸಿ ವಿವೇಕಾನಂದ, ಹುಡಾ ಅಧ್ಯಕ್ಷ ಇಮಾನ್ ನಿಯಾಜಿ, ಪೌರಾಯುಕ್ತ ಶಿವಕುಮಾರ್ ಎರ್ರಗುಡಿ, ಡಿವೈಎಸ್ಪಿ ಮುರಳೀಧರ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗಿ ಆಗಿದ್ರು.
PublicNext
11/09/2026 09:10 pm
LOADING...