ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 5ನೇ ದಿನದ ಗಣಪತಿ ಮೆರವಣಿಗೆ ವೇಳೆ ಒಬ್ಬ ಯುವಕನನ್ನು ಏಳೆಂಟು ಮಂದಿ ಸೇರಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸಪೇಟೆಯ ಮೇನ್ ಮಾಸ್ಕ್ ಬಳಿ ಗಣಪತಿ ಮೆರವಣಿಗೆ ವೇಳೆ ಎರಡು ಗುಂಪುಗಳ ಯುವಕರ ನಡುವೆ ಹೊಡೆದಾಟ ನಡೆದಿತ್ತು. ಹೊಡೆದಾಟದ ದೃಶ್ಯಗಳು ವೈರಲ್ ಆಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿತ್ತು. ನೆಮ್ಮದಿಗೆ ಭಂಗ ತಂದ ಆರೋಪದ ಮೇಲೆ ಎರಡೂ ಗುಂಪುಗಳ ಯುವಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಒಂದು ಗುಂಪಿನ ಯುವಕರಾದ ರಘು (22) ಮತ್ತು ತಿಪ್ಪೇಶ್ (20), ಮತ್ತೊಂದು ಗುಂಪಿನ ಯುವಕರಾದ ಉದಯ್ ಕುಮಾರ್ (20), ದರ್ಶನ್ (19), ಚಂದ್ರು (19), ಸೂರಿ (20) ಹಾಗೂ ಹನುಮಂತ (19) ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
PublicNext
20/09/2026 03:42 pm
LOADING...