ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲಾಡಳಿತದ ಸಂಧಾನ ಸಮಾಧಾನ ತಂದಿಲ್ಲ; ಸಂವಿಧಾನಕ್ಕೆ ಗೌರವ ನೀಡಿ ಒಪ್ಪಿದ್ದೇವೆ: ಹಿರೇಹಡಗಲಿ ಮಠದ ಹಾಲಶ್ರೀ

ಹಡಗಲಿ : ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಐದನೇ ದಿನದ ಗಣೇಶ ಮೆರವಣಿಗೆಗೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ, ಇಂದು ನಮ್ಮ ಮೆರವಣಿಗೆಯನ್ನು ತಡೆದಿದ್ದಾರೆ. ನಾಳೆ ಅವರ ಈದ್ ಮಿಲಾದ್ ಮೆರವಣಿಗೆ ಬೇಡ, ಹಿಂದೂಗಳ ಮನೆ ಎದುರು ಬರಬಾರದು ಎಂದು ಜನರು ಹೇಳುತ್ತಿದ್ದಾರೆ. ನಮಗೂ ಹಾಗೆಯೇ ಅನಿಸುತ್ತಿದೆ ಎಂದು ಹಿರೇಹಡಗಲಿ ಮಠದ ಹಾಲಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

ಹಡಗಲಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದ ಮುಂದೆಯೂ ನಾವು ನಮ್ಮ ವಿಚಾರವನ್ನು ಹೇಳಿಕೊಂಡಿದ್ದೇವೆ. ಶಾಸಕರು ಮುತುವರ್ಜಿ ವಹಿಸಿ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದ್ದಾರೆ. ಅಡ್ಡಿಪಡಿಸಿದವರ ಮೇಲೆ ಕ್ರಮ ಆಗಬೇಕು ಅನ್ನೋದು ಸತ್ಯ. ಮುಂದೆ ಗಣೇಶ ಮೂರ್ತಿಯನ್ನು ತಡೆಯುವ ಧೈರ್ಯ ಯಾರೂ ಮಾಡಬಾರದು. ಹಡಗಲಿಯಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದರು.

ಶಾಸಕ ಕೃಷ್ಣ ನಾಯಕ್ ಅವರು ಎಸ್‌ಪಿ ಜಾಹ್ನವಿ ಅವರ ಎದುರು ಖಡಾಖಂಡಿತವಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಎಸ್‌ಪಿ ಜಾಹ್ನವಿ ಅವರೂ ಒಪ್ಪಿಕೊಂಡಿದ್ದಾರೆ. ಸಂಧಾನ ಸಭೆಯಿಂದ ಪರಿಪೂರ್ಣ ಸಮಾಧಾನ ಸಿಕ್ಕಿಲ್ಲ. ಆದರೆ ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು ಎಂಬ ನಿಯಮ ಇರುವುದರಿಂದ ಒಪ್ಪಿಕೊಂಡಿದ್ದೇವೆ.

ಸಂವಿಧಾನವನ್ನು ಗೌರವಿಸುತ್ತೇವೆ, ನೆಲದ ಕಾನೂನನ್ನು ಗೌರವಿಸುತ್ತೇವೆ ಎನ್ನುವುದಾದರೆ ಅದರ ನಿಯಮಾನುಸಾರ ನಾವು ನಡೆಯಬೇಕಿದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಂಧಾನವನ್ನು ಒಪ್ಪಿಕೊಂಡಿದ್ದೇವೆ ಎಂದು ಹಾಲಶ್ರೀಗಳು ಹೇಳಿದರು.

Edited By : Vinayak Patil
PublicNext

PublicNext

20/09/2026 02:44 pm

Cinque Terre

1.59 K

Cinque Terre

0

ಸಂಬಂಧಿತ ಸುದ್ದಿ