ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡೋಣ - ಉಸ್ತುವಾರಿ ಸಚಿವ ಬಸವಂತಪ್ಪ ಕರೆ

ಹೊಸಪೇಟೆ : ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಕಲ್ಯಾಣ ಕರ್ನಾಟಕ ಅವರಿಂದ ವಿಮುಕ್ತ ಹೊಂದಿ ಕರ್ನಾಟಕ, ದೇಶದೊಂದಿಗೆ ವಿಲೀನ ಹೊಂದಿದ ಭಾಗವಾಗಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಿಕೊಳ್ಳುತ್ತಾ ಬರಲಾಗಿದೆ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಭಾಗವಾಗಿ ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಕೆ. ಎಸ್ ಬಸವಂತಪ್ಪ ಅವರಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹೊಸಪೇಟೆ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿದ ಬಳಿಕ ವಿವಿಧ ತುಕಡಿಗಳ ಆಕರ್ಷಕ ಪಥಸಂಚಲ ನಡೆಯಿತು. ಬಳಿಕ ವಿವಿಧ ತುಕಡಿಗಳ ಮೂಲಕ ಗೌರವ ವಂದನೆ ಸ್ವೀಕರಿಸಿದ್ರು. ಉಸ್ತುವಾರಿ ಸಚಿವರಿಗೆ ಮಾಜಿ ಸಚಿವ ಪಿ. ಟಿ ಪರಮೇಶ್ವರ ನಾಯ್ಕ್, ಶಾಸಕ ಹೆಚ್. ಆರ್ ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿ. ಪಂ ಸಿಇಓ ಗರೀಮಾ ಪನ್ವಾರ್ ಸೇರಿದಂತೆ ಇತರರು ಭಾಗಿ ಆಗಿದ್ದರು.

Edited By :
PublicNext

PublicNext

17/09/2026 03:14 pm

Cinque Terre

8.84 K

Cinque Terre

0

ಸಂಬಂಧಿತ ಸುದ್ದಿ