ಬೈಲಹೊಂಗಲ : ನಗರದ ಬಸವ ನಗರದಲ್ಲಿರುವ ಶ್ರೀಮಾತಾ ದುರ್ಗಾಪರಮೇಶ್ವರಿಯಮ್ಮನವರ ನವರಾತ್ರಿ ಉತ್ಸವದ ಕೊನೆಯ ದಿನ ಮಹಾ ಚಂಡಿಕಾಯಾಗದ ಪೂರ್ಣಾಹುತಿ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.
ಪರಮಪೂಜ್ಯ ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು ಸುಮಾರು 3,000 ಪೂರ್ಣಾಹುತಿಗಳನ್ನು ನೆರವೇರಿಸಿ, ನಾಡಿನ ಸುಖ, ಶಾಂತಿ, ಸಮೃದ್ಧಿ ಹಾಗೂ ರೈತರ ಏಳಿಗೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಾಡಿನ ಒಳಿತಿಗಾಗಿ ನವರಾತ್ರಿಯ ಒಂಬತ್ತು ದಿನಗಳ ಕಾಲ ಮಹಾ ಚಂಡಿಕಾಯಾಗವನ್ನು ಆಯೋಜಿಸಿರುವ ಡಾ. ಮಹಾಂತೇಶ ಶಾಸ್ತ್ರಿಗಳ ಕಾರ್ಯ ಶ್ಲಾಘನೀಯವಾಗಿದೆ.
ಉದ್ಯಮಿ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ನಾಡಿನ ಸಮೃದ್ಧಿ ಹಾಗೂ ಜನರ ಸುಖ, ಶಾಂತಿಗಾಗಿ ದೇವಿಯ ಆರಾಧನೆ ಅತ್ಯಂತ ಅವಶ್ಯಕವಾಗಿದೆ. ಭಕ್ತಿಯಿಂದ ದೇವಿಯನ್ನು ಪೂಜಿಸುವುದರಿಂದ ಜೀವನದ ಸಂಕಷ್ಟಗಳು ದೂರವಾಗಿ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ನಂತರ 500ಕ್ಕೂ ಅಧಿಕ ಸುಮಂಗಲೆಯರಿಗೆ ಬಾಗಿನ ಸಮರ್ಪಿಸುವ ಕಾರ್ಯಕ್ರಮ ಹಾಗೂ ಬನ್ನಿ ಮುಡಿಯುವ ಸಂಪ್ರದಾಯ ವಿಜೃಂಭಣೆಯಿಂದ ನೆರವೇರಿತು. ನೂರಾರು ಸದ್ಭಕ್ತರು, ಸುಮಂಗಲೆಯರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
PublicNext
21/10/2026 07:53 pm
LOADING...