ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಕಚೇರಿಯಲ್ಲಿ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ

ತುಮಕೂರು : ಮಹರ್ಷಿ ವಾಲ್ಮೀಕಿಯವರು ತಾವು ರಚಿಸಿದ ರಾಮಾಯಣ ಮಹಾಕೃತಿಯ ಮೂಲಕ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಹೇಗೆ ಬದುಕಬೇಕು ಎಂಬ ಆದರ್ಶದ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಅವರ ಆದರ್ಶಗಳು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಮಾನವೀಯತೆಯ ಬೆಳಕು ಹರಡುತ್ತವೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಶಾಸಕರು, ಮಹನೀಯರ ಜಯಂತಿಯನ್ನು ಕೇವಲ ಆಚರಣೆ ಮಾಡಿದರೆ ಸಾಲದು, ಅವರು ಸಾರಿದ ಆದರ್ಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಭಾರತೀಯ ಜನತಾ ಪಕ್ಷವು ವಾಲ್ಮೀಕಿ ಮಹರ್ಷಿಗೆ ಹೆಚ್ಚು ಗೌರವ ಸಲ್ಲಿಸುತ್ತಾ ಬಂದಿದೆ. ಬಿಜೆಪಿ ಸರ್ಕಾರವಿದ್ದಾಗ ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿ ಸರ್ಕಾರದಿಂದ ಆಚರಣೆ ಮಾಡಲು ತೀರ್ಮಾನಿಸಲಾಯಿತು. ವಾಲ್ಮೀಕಿ ಸಮುದಾಯದ ನೆರವಿಗೆ ಹೆಚ್ಚಿನ ಅನುದಾನ ನೀಡಿ ಸಮಾಜದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ನೆರವಾಗಿತ್ತು. ಕೇಂದ್ರ ಸರ್ಕಾರವು ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಮಹರ್ಷಿಹ ಹೆಸರಿಟ್ಟು ಆದಿಕವಿಗೆ ಗೌರವ ಸಲ್ಲಿಸಿದೆ ಎಂದು ಜ್ಯೋತಿಗಣೇಶ್ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಸಂಶೋಧಕ ಎಸ್ ನಾಗೇಂದ್ರ ಅವರು ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿಯವರು ಸಮಾಜಕ್ಕೆ ಕೊಟ್ಟ ಸಂದೇಶ, ಕೊಡುಗೆ, ಅವರ ಆದರ್ಶ ಬದುಕು ಕುರಿತು ಮಾತನಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ಜಿಲ್ಲಾ ಉಪಾಧ್ಯಕ್ಷ ಊರುಕೆರೆ ವಿಜಯಕುಮಾರ್ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ದಿಲೀಪ್, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೈ.ಹೆಚ್. ರವಿಚಂದ್ರ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಗುಬ್ಬಿ ಗಂಗಣ್ಣ, ನಗರ ಮಂಡಲ ಎಸ್.ಟಿ ಮೋರ್ಚಾ ಅಧ್ಯಕ್ಷ ರಾಕೇಶ್ ಟಿ.ಆರ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ವಿರೂಪಾಕ್ಷಪ್ಪ, ಮುಖಂಡರಾದ ವಿನೋದ್, ಗಂಗೇಶ್ ಹದ್ದಿನಕಲ್ಲು, ಶಿವರಾಜು, ವಸಂತಕುಮಾರಿ, ಮಂಜುಳಾ ಮತ್ತಿತರರು ಭಾಗವಹಿಸಿ ವಾಲ್ಮೀಕಿ ಮಹರ್ಷಿಗೆ ಗೌರವ ಸಲ್ಲಿಸಿದರು.

Edited By : PublicNext Desk
PublicNext

PublicNext

27/10/2026 08:28 am

Cinque Terre

2.75 K

Cinque Terre

0

ಸಂಬಂಧಿತ ಸುದ್ದಿ