ತುಮಕೂರು:- ಡೆಹ್ರಾಡೂನ್ ಹೆಲಿಕಾಪ್ಟರ್ ದುರಂತ ಹಿನ್ನಲೆ ಕುಣಿಗಲ್ ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಗೆ ಕುಣಿಗಲ್ ಶಾಸಕ ರಂಗನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ಇಬ್ಬರು ಮೃತ ಪಟ್ಟಿರುವುದು ಬಹಳ ದುಃಖದ ವಿಚಾರ. ಬಹಳಷ್ಟು ಜನ ಡೆಹ್ರಾಡೂನ್ ಗೆ ಪ್ರವಾಸ ಹೋಗ್ತಿರುತ್ತೇವೆ. ಖಾಸಗಿ ಹೆಲಿಕಾಪ್ಟರ್ ನ್ನ ತಗೊಂಡೊಗ್ತೀವಿ. ಆದ್ರೆ ವಾತಾವರಣ ಸರಿಯಿಲ್ಲದ ಕಾರಣ ದುರಂತ ನಡೆದಿದೆ. ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಸೋಲಂಕಿ ಮೃತ ಪಟ್ಟಿದ್ದಾರೆ. ಇವರು ಮೊದಲು ಕುಣಿಗಲ್‌ನಲ್ಲಿ ಸೇವೆ ಸಲ್ಲಿಸಿದ್ದರು. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ. ನಮ್ಮ ಕೆಲ ಮುಖಂಡರನ್ನ ಸ್ಥಳಕ್ಕೆ ಕಳಿಸುತ್ತಿದ್ದೇನೆ. ಮೃತದೇಹಗಳನ್ನ ವ್ಯವಸ್ಥಿತವಾಗಿ ತರಲು ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದ್ದೇನೆ ಅಂತ ತಿಳಿಸಿದರು.
PublicNext
31/10/2026 01:31 pm
LOADING...