ತುಮಕೂರು ಜಿಲ್ಲಾ ಬಿಜೆಪಿ ಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ, ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಜ್ವಾಲಾಮುಖಿಯಾಗಿ ಸ್ಪೋಟಗೊಂಡಿದೆ,ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೇ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ದ ತಮ್ಮ ಆಕ್ರೋಶ ಹೊರಹಾಕಿ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಬದಲಾಯಿಸದಿದ್ದರೆ ಉಳಿಗಾಲವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ, ಬಿಜೆಪಿ ಜಿಲ್ಲಾಧ್ಯಕ್ಷರು ಮಾಡಿಕೊಂಡಿರುವ ಒಳ ಒಪ್ಪಂದಗಳು,ಪಕ್ಷದಲ್ಲಿ ಸದಸ್ಯರನ್ನು ನಡೆಸಿಕೊಳ್ಳುವ ರೀತಿ, ರಾಜ್ಯ ನಾಯಕರ ಒಲೈಕೆಗೆ ಸ್ತಳೀಯ ನಾಯಕರ ವಿರುದ್ದ ನಡೆಸುವ ಶಡ್ಯಂತ್ರ ಸೇರಿದಂತೆ ಐದು ಪಾಯಿಂಟ್ ಗಳನ್ನು ಹಾಕಿ ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಿದ್ದಾರೆ.
PublicNext
02/11/2026 10:08 pm
LOADING...