ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸಿಎಂ ತವರಲ್ಲಿ ಅಮಾನವೀಯ ಘಟನೆ: ಮಲ ವಿಸರ್ಜಿಸುವಂತೆ ಹಲ್ಲೆ ನಡೆಸಿದ್ರಾ ಕೊರಟಗೆರೆ ಪೊಲೀಸರು

ತುಮಕೂರು

ಉಪಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಪೊಲೀಸ್ ಠಾಣೆಗೆ ತೆರಳಿದ್ದ ವ್ಯಕ್ತಿಗೆ ಮಲ ಮೂತ್ರ ವಿಸರ್ಜಿಸುವ ಹಾಗೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಈ ಬಗ್ಗೆ ನಿಷ್ಪಕ್ಷವಾದ ತನಿಖೆ ನಡೆದು ನೊಂದವರಿಗೆ ನ್ಯಾಯ ದೊರಕಿಸುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿ ಬರುತ್ತಿದೆ.

ಕಾಂತರಾಜು ಎಂಬ ವ್ಯಕ್ತಿಯ ಮೇಲೆ ಕೊರಟಗೆರೆ ಠಾಣೆ ಪಿಎಸ್ಐ ತೀರ್ಥೇಶ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ,ಹಲ್ಲೆಗೊಳಗಾದ ಕಾಂತರಾಜು ಠಾಣೆಯಲ್ಲೇ ಮಲವಿಸರ್ಜಿಸಿ ಪೊಲೀಸ್ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಪಿ ಎಸ್ ಐ ತೀರ್ಥೇಶ್ ಕಾಂತರಾಜು ಮೇಲೆ ನಡೆಸಿರುವ ಹಲ್ಲೆಗೆ ಸಂಬಂಧಿಸಿದಂಕೆ ಸಿಸಿಟಿವಿ ದೃಷ್ಯಾವಳಿ ಆಧರಿಸಿ ಕ್ರಮ ಜರುಗಿಸುವಂತೆ ಪ್ರಜ್ಙಾವಂತರು ಆಗ್ರಹಿಸಿದ್ದಾರೆ.

Edited By :
PublicNext

PublicNext

28/10/2026 07:14 pm

Cinque Terre

8.12 K

Cinque Terre

0

ಸಂಬಂಧಿತ ಸುದ್ದಿ