ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ : ಗಂಗಾವತಿಯಲ್ಲಿ ಆರ್‌ಎಸ್‌ಎಸ್ ಭವ್ಯ ಪಥಸಂಚಲನ

ಕೊಪ್ಪಳ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) 101ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಭವ್ಯ ಪಥಸಂಚಲನ ನಡೆಯಿತು.

ಪಥಸಂಚಲನದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಆರ್‌ಎಸ್‌ಎಸ್ ಗಣವೇಷ ಧರಿಸಿ ಸ್ವಯಂಸೇವಕರೊಂದಿಗೆ ಹೆಜ್ಜೆ ಹಾಕಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಥಸಂಚಲನದಲ್ಲಿ ಸಾವಿರಾರು ಸ್ವಯಂಸೇವಕರು ಭಾಗವಹಿಸಿದ್ದರು.

ಗಣವೇಷಧಾರಿಗಳ ಶಿಸ್ತಿನ ಹೆಜ್ಜೆ ಹಾಗೂ ಘೋಷಣೆಗಳು ಪಥಸಂಚಲನಕ್ಕೆ ವಿಶೇಷ ಮೆರುಗು ನೀಡಿದವು. ನಗರದ ವಿವಿಧೆಡೆ ಸಾರ್ವಜನಿಕರು ಹೂಮಳೆ ಸುರಿಸುವ ಮೂಲಕ ಸ್ವಯಂಸೇವಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ರಾಜ್ಯ ಸರ್ಕಾರದ ವಿರೋಧದ ನಡುವೆಯೂ ನಡೆದ ಈ ಪಥಸಂಚಲನ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.

Edited By :
PublicNext

PublicNext

02/11/2026 05:00 pm

Cinque Terre

6.21 K

Cinque Terre

0

ಸಂಬಂಧಿತ ಸುದ್ದಿ